ಗೋಕರ್ಣ:
ಗಂಗಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ ವೇಳೆ ಬಲೆಗೆ ದೊರೆತ್ತಿದ್ದು, ಅಲ್ಲಿನ ಮೀನು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿತ್ತು.ಹಕ್ಕಿಯಂತೆ ರೆಕ್ಕೆ ಇರುವ ಈ ಮೀನು ಜನರನ್ನು ಆಕರ್ಷಿಸುತ್ತಿದೆ.
ಬಹಳಷ್ಟು ಜನರಿಗೆ ಪರಿಚಯವಿರದ ಸಮುದ್ರದಲ್ಲಿ ಹೇರಳವಾಗಿ ಸಿಗುವ ಹಕ್ಕಿ ಮೀನಿನ ಪರಿಚಯವನ್ನು ಇಲ್ಲಿನ ನಿವೃತ್ತ ಸೈನಿಕ ಗಜಾನನ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಗಜಾನನ ಪೈ ಮಾತನಾಡಿ ತಾನು ನಮ್ಮ ಊರಿನಲ್ಲಿ ಯಾವುದೇ ರೀತಿಯ ವಿಶೇಷ ಘಟನೆಗಳು, ತೀರ ಅಪರೂಪದ ವಸ್ತುಗಳು ದೊರೆತರೆ ಅದನ್ನು ಜನರಿಗೆ ತಿಳಿಸುವ ಉದ್ದೇಶ ನನ್ನದು ಎಂದಿದ್ದು.ಅದರಂತೆ ಈ ಮೀನನನ್ನು ಪರಿಚಯಿಸಿದ್ದೇನೆ | ಎಂದಿದ್ದಾರೆ.
ಯಾವುದೇ ಮೀನುಗಳ ಸಿಗದ ಸಮಯದಲ್ಲಿ ಈ ಮೀನುನ್ನು ಆಹಾರಕ್ಕೆ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಹಲವು ವರ್ಷಗಳಿಂದ ಮೀನು ಹೊಟೇಲ್ ನಡೆಸುತ್ತಿದ್ದ ವಾಸುದೇವ ಕಾಮತ ತಿಳಿಸಿದ್ದಾರೆ.
ಪೈಮಾಮ್ ವಿಡಿಯೋ ಫೇಮಸ್: ಈ ಹಿಂದೆ ಇಲ್ಲಿನ ಹಲವು ತರಕಾರಿ ಬೆಳೆ, ರುಚಿಕರ ಖಾದ್ಯ ತಯಾರಿಸುವುದು, ಹಬ್ಬ ಹರಿದಿನದ ವಿಶೇಷತೆಗಳನ್ನು ತಿಳಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಹವ್ಯಾಸ ಹೊಂದಿದ್ದು, ಹಲವರು ಪೈಮಾಮ್ ವಿಡಿಯೋ ಬಂದಿಲ್ವಾ ಎಂದು ಕಾತರದಿಂದ ಕಾಯುತ್ತಿರುವುದು ವಿಶೇಷವಾಗಿದೆ.
Leave a Comment