ಬೆಂಗಳೂರು:ವ್ಯಾಪಕಭ್ರಷ್ಟಾಚಾರನಡೆಯುತ್ತಿದೆಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬೆಂಗಳೂರು ಸೇರಿದಂತೆ 21 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಿತಿ ಮೀರಿದ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಸುಮಾರು 150 ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ವಿವಿಧೆಡೆ ದಾಳಿ ನಡೆಸಿದ್ದಾರೆ.
ಬನ್ನೇರುಘಟ್ಟ, ಯಲಹಂಕ, ಮಹದೇಪುರ, ವರ್ತೂರು, ದೊಮ್ಮಲೂರು, ಬೊಮ್ಮನಹಳ್ಳಿ, ಬೇಗೂರು, ಜೆಪಿನಗರ, ಬನಶಂಕರಿ, ಬಸವನಗುಡಿ, ಕೆಂಗೇರಿನಾಗವಾರ, ಬೆಂಗಳೂರು ಗ್ರಾಮಾಂತರ ಸಬ್ ರಿಜಿಸ್ಟರ್ ಕಚೇರಿ, ರಾಮನಗರ, ಕನಕಪುರ ಸೇರಿದಂತೆ 21 ಕಡೆಗಳಲ್ಲಿ ಉಪ ನೋಂದಣಿ ಕಚೇರಿಗಳಲ್ಲಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ವರ್ತೂರು ಉಪನೋಂದಣಿ ಕಚೇರಿಯಲ್ಲಿ3.45 ಲಕ್ಷ ನಗದು ಪತ್ತೆಯಾಗಿದ್ದು, ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ಮಧ್ಯವರ್ತಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ગ્ ಕೊಂಡಿದ್ದಾರೆ. ಉಳಿದಂತೆ ಪರಿಶೀಲನೆ ನಡೆಯುತ್ತಿದ್ದು, ಬೇರೆ ಕಡೆ ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Leave a Comment