ಬಲೆಗೆ ಬಿತ್ತು ಸನ್‌ಫಿಶ್ 15 ಕೆ.ಜಿ ತೂಕದ ಮೀನು !
ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.
ಹೊನ್ನಾವರ: ಹೊನ್ನಾವರ ಕರಾವಳಿ ಭಾಗದಲ್ಲಿ ಅಪರೂಪ ಎನಿಸಿದ ಸನ್ ಫಿಶ್ ಜಾತಿಯ ಸರಿಸುಮಾರು 15 ಕೆಜಿ ತೂಕವುಳ್ಳ ವಿಶಿಷ್ಟ ಆಕೃತಿಯ ಬಾಲ ಇಲ್ಲದ ಮೀನೊಂದು ಸ್ಥಳೀಯ ಮೀನುಗಾರರಿಗೆ ಸಿಕ್ಕಿದೆ.
ಜಗದೀಶ್ ತಾಂಡೇಲ್ ಮಾಲೀಕತ್ವದ ಪಿ ಪೇಶಾ ದೋಣಿಯ ಮೀನುಗಾರರಿಗೆ ಈ ಮೀನು ಲಭಿಸಿದೆ. ಈ ಮೀನು ದೇಶಿಯವಾಗಿ ಅಪರೂಪವಾದರೂ ತೈವಾನ್, ಜಪಾನ್ ದೇಶಗಳಲ್ಲಿ ಅತಿ ಪ್ರೀತಿಯ ಸ್ವಾದಿಷ್ಟ ಮೀನಾಗಿದೆ.
ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.;
ಸಮುದ್ರದ ಸನ್‌ಫಿಶ್‌ನ ಮಾಂಸವನ್ನು ಕೆಲವು ಪ್ರದೇಶಗಳಲ್ಲಿ ಸವಿಯಾದ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ದೊಡ್ಡ ಮಾರುಕಟ್ಟೆಗಳು ತೈವಾನ್ ಮತ್ತು ಜಪಾನ್ ನಲ್ಲಿ ಸನ್‌ಫಿಶ್‌ನ ಎಲ್ಲಾ ಭಾಗಗಳನ್ನು ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ,.ರೆಕ್ಕೆಗಳಿಂದ ಆಂತರಿಕ ಅಂಗಗಳವರೆಗೆ ಕೆಲವು ಭಾಗಗಳನ್ನು ಸಾಂಪ್ರದಾಯಿಕ ಔಷಧದ ಕೆಲವು ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಸಮುದ್ರದ ಸನ್‌ಫಿಶ್‌ನ ಮಾಂಸವನ್ನು ಕೆಲವು ಪ್ರದೇಶಗಳಲ್ಲಿ ಸವಿಯಾದ ಪದಾರ್ಥವೆಂದು ಪರಿಗಣಿಸಲಾಗುತ್ತದೆ
ಇಂತಹ ವಿಶಿಷ್ಟ ಜಾತಿಯ ಸಮುದ್ರದ ಸನ್ ಫಿಶ್ ಮೀನು ಸಿಕ್ಕಿರುವ ಸುದ್ದಿ ಸಿಕ್ಕಾಕ್ಷಣ ಸ್ಥಳೀಯರು ಆಗಮಿಸಿ ಕುತೂಹಲದಿಂದ ವೀಕ್ಷಿಸಿದರು.
Leave a Comment