ಅಡಿಕೆ ಎಲೆಚುಕ್ಕಿರೋಗ 10 ಕೋಟಿ ಬಿಡುಗಡೆ
ಕಡೂರು : ಮಲೆನಾಡು ಭಾಗದಲ್ಲಿ ಅಡಿಕೆ ಎಲೆ ಚುಕ್ಕಿರೋಗದಿಂದಾಗಿ ಬೆಳೆಗಾರರು ಕಂಗಟ್ಟಿದ್ದು, ರೋಗ ನಿಯಂತ್ರಣ ಔಷಧಕ್ಕಾಗಿ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಮಲೆನಾಡು ಭಾಗದಲ್ಲಿ ಅಡಿಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದೆ. ಈ ಸಂಬAಧ ರಾಜ್ಯ ಸರಕಾರಕ್ಕೆ ಮಾಹಿತಿ ಇದ್ದು, ರೋಗದ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಹಲವು ವಿವಿಗಳ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ.
ವಿಜ್ಞಾನಿಗಳ ವರದಿ ಆಧರಿಸಿ ಸರಕಾರ ಅಡಿಕೆ ಬೆಳೆಗಾರ ನೆರವಿಗೆ ಧಾವಿಸಲಿದೆ. ರೋಗ ನಿವಾರಣೆ ಹಾಗೂ ನಿಯಂತ್ರಣಕ್ಕೆ ಎಷ್ಟೇ ಖರ್ಚಾದರೂ ಸರಕಾರ ಭರಿಸಲು ಸಿದ್ದವಿದೆ ಎಂದರು.
ವಾಣಿಜ್ಯ ಬೆಳೆಗಳಲ್ಲದೇ ತರಕಾರಿ ಬೆಳೆ ಹಾನಿ ಸಂಬAಧವೂ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ಅತಿವೃಷ್ಠಿ ಸಂದರ್ಭ ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಕೇಂದ್ರ ಸರಕಾರದ ಮಾನದಂಡಗಳನ್ನು ಅನುಸರಿಸಿ ಪರಿಹಾರವನ್ನು ಹೆಚ್ಚಿನ ಪ್ರಮಾಣದಲ್ಲೇ ನೀಡಲಾಗಿದೆ. ಪರಿಹಾರ ಎರಡು ಪಟ್ಟು ನೀಡಿದ್ದೇವೆ ಎಂದರು.
Leave a Comment