ಯಲ್ಲಾಪುರ ಈಶ್ವರ ದೇಗುಲದಲ್ಲಿ ಸಂಭ್ರಮದ ಕಾರ್ತಿಕೋತ್ಸವ
ಯಲ್ಲಾಪುರ ಪಟ್ಟಣದ ಈಶ್ವರ ದೇವಾಲಯದಲ್ಲಿ ಬುಧವಾರ ಕಾರ್ತಿಕೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಈಶ್ವರ್ ದೇವರಿಗೆ ಬೆಳ್ಳಿ ಪ್ರಭಾವಳಿ, ಮುಖ , ಸೇರಿದಂತೆ ಆಭರಣ ತೊಡಿಸಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಶತರುದ್ರಾಭಿಷೇಕ, ಶತರುದ್ರಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.
ರಾತ್ರಿ ಕಾರ್ತಿಕೋತ್ಸವ, ಮಹಾಮಂಗಳಾರತಿ ನಡೆಯಿತು ಅಪಾರ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿ ಹಣ್ಣು ಕಾಯಿ ಸೇವೆ ಸಲ್ಲಿಸಿ ಹಣತೆಯ ದೀಪ ಹಚ್ಚಿ ಕಾರ್ತಿಕೋತ್ಸವ ದಲ್ಲಿ ಪಾಲ್ಗೊಂಡರು.
Leave a Comment