ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆ
ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮಪಂಚಾಯತ ಸಭಾಭವನದಲ್ಲಿ ಸ್ವಸಹಾಯ ಸಂಘಗಳಲ್ಲಿ ಕರ ವಸೂಲಿ, ಘನತಾಜ್ಯ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಮಾತನಾಡಿ.ಈಗಾಗಲೆ ಮನೆಗಳ ಸರ್ವೆಕಾರ್ಯ ಮುಗಿಯುವ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳಿಗೆ ಕರ ವಸೂಲಿಯಜವಾಬ್ದಾರಿವಹಿಸಲಾಗುವದು.
ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆ
ಈಗಾಗಲೇ ಘನತಾಜ್ಯ ವಿಲೇವಾರಿ ನಿರ್ವಹಣೆ ಮಾಡಲು ಸೂಚಿಸಲಾಗಿದೆ.ಸ್ವಸಹಾಯ ಸಂಘ ಸಾಲ ಸೌಲಭ್ಯಕ್ಕೆ ಅಷ್ಟೇ ಸೀಮಿತವಾಗದೆ ಅಲ್ಲಿನ ಸದಸ್ಯ ರ ಸೇವಾ ನಿಷ್ಠೆ ಕರ್ತವ್ಯಪರತೆ ಯಿಂದಾಗಿ ಆಡಳಿತದಲ್ಲಿ ಅವರ ಸಹಭಾಗಿತ್ವ ಮೂಲಕ ಅವರ ಸೇವೆ ಪಡೆಯುವಲ್ಲಿ ಮುಂದಾಗುತ್ತಿದೆ ಎಂದರಲ್ಲದೇ ಎಲ್ಲಾ ಸ್ವಸಹಾಯ ಸಂಘಗಳಲ್ಲಿ ಡಾಟಾ ಸಂಗ್ರಹಿಸಲು ತಂತ್ರಜ್ಞಾನದ ಅವಶ್ಯಕತೆ ತುಂಬಾ ಇತ್ತು ಅದನ್ನು ಕಂಪ್ಯೂಟರ ನೀಡುವ ಮೂಲಕ ವನಚೇತನದವರು ಪೂರೈಸಿದ್ದಾರೆ. ಈ ಸಂಜೀವಿನಿ ಒಕ್ಕೂಟ ಮುಂದುವರೆದ ಸಂಘವಾಗುತ್ತಿರುವದು ಹೆಮ್ಮಯೆನಿಸುತ್ತದೆ.
ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆ
ಪಂಚಾಯತಿಗಳು ಕಂಪ್ಯೂಟಿಕರಣಗೊAಡು ಮಾಹಿತಿಗಳನ್ನು ಪೆಪರಲೆಸ್ ಆಗಿ ನಿರ್ವಹಣೆ ಮಾಡುವತ್ತ ಹೆಜ್ಜೆ ಇಟ್ಟಿದೆ. ಪ್ರತಿಯೊಂದು ಕ್ಷೇತ್ರಕ್ಕೂ ಕಂಪ್ಯೂಟರ ಜ್ಞಾನ ಅತ್ಯಾವಶ್ಯಕವಾಗಿದೆ ಎಂದರು.ಮಂಗಳೂರ ಇನಶ್ಯುರನ್ಸ ಸರ್ವೇಯರ ಅಶೋಸಿಯೇಶನ ರವರು ರಾಕೇಶ ಬೊಳಾರ ನೇತ್ರತ್ವದಲ್ಲಿ ನೀಡಿರುವ ಕಂಪ್ಯೂಟರ ಹಸ್ತಾಂತರಿಸಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಸಿದ್ದಿ ಕಾರ್ಯಕ್ರಮ ಉದ್ಘಾಟಿಸಿದರು.
ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿಸಿದ್ದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬರು ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಲು ನಮ್ಮ ಸಂಘ ಪ್ರೇರಕ ಶಕ್ತಿಯಾಗಿದೆ. ಗ್ರಾಪಂ ಐದು ವಾರ್ಡಗಳಿವೆ ೫೫ ಸ್ವಸಹಾಯ ಸಂಘಗಳಿವೆ. ಪ್ರತಿ ವಾರ್ಡಗಳ ಸಂಘಗಳನ್ನು ಪೈಲ್ ಮಾಡಿ ಪ್ರತ್ಯೇಕ ಹೆಸರು ನೀಡಲಾಗಿದೆ.À ಸೀತಾರಾಮ ಸಂಜೀವಿನಿ ಗ್ರಾಮ ಪಂಚಾಯತಮಟ್ಟದ ಒಕ್ಕೂಟಕ್ಕೆ .
ಮಂಗಳೂರ ಇನಶ್ಯುರನ್ಸ ಸರ್ವೇಯರ ಅಶೋಸಿಯೇಶನ ರವರು ರಾಕೇಶ ಬೊಳಾರ ನೇತ್ರತ್ವದಲ್ಲಿ ನೀಡಿರುವ ಕಂಪ್ಯೂಟರ ಇರುವದರಿಂದ ಸುಲಭವಾಗಿ ಮಾಹಿತಿ ಸಂಗ್ರಹಿಸಲು ,ನೀಡಲು ಸಾಧ್ಯವಾಗುತ್ತದೆ ಎಂದರು . ಗ್ರಾಪಂ ಸದಸ್ಯ ವಿಎನ ಭಟ್ ಏಕಾನ ,ವನಚೇತನ ತಂಡದ ದಿನೇಶ ಹೊಳ್ಳ, ಗ್ರಾಪಂ ಪಿಡಿಓ ಚನ್ನವೀರಪ್ಪ ಕುಂಬಾರ, ಎನ್ ಆರ ಎಲ್ ಎಂ ವ್ಯವಸ್ಥಾಪಕ ಮಂಜಣ್ಣ ಬಿ, ವಲಯ ಮೇಲ್ವೀಚಾರಕರಾದ ವೀರಣ್ಣ ಕೆ, ರಾಜಾರಾಮ ವೈದ್ಯ, ಒಕ್ಕೂಟದ ಪದಾಧಿಕಾರಿಗಳಾದ ಪ್ರೇಮಾಜೋಶಿ,ವೀಣಾದೇವಳಿ,ಸದಸ್ಯರುಪ್ರಮುಖರಾದ ಅನಂತ ಸಿದ್ದಿ ಹಾಗೂ , ಮುಂತಾದವರು ಇದ್ದರು.
Leave a Comment