ಮದುವೇಯಾದ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಅಂಕೋಲಾ :
ಗೈಹಿಣಿಯೋರ್ವಳು ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ ತಾಲೂಕಿನ ಬೆಳಸೆ ಹಂದಿಗದ್ದೆಯಲ್ಲಿ ನಡೆದಿದೆ.
ಯಮುನಾ ಗೌಡ (30) ನೇಣಿಗೆ ಶರಣಾದ ನತದೃಷ್ಟೆ. ಈ ಕುರಿತು ಮೃತಳ ಅಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯಮುನಾಳನ್ನು 7 ತಿಂಗಳ ಹಿಂದೆ ಬೆಳಸೆ ಹಂದಿಗದ್ದೆಯ ವಿಘ್ನೇಶ್ವರ ಗೌಡನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಮೂರು ತಿಂಗಳ ನಂತರ ಯಮುನಾಳ ಗಂಡ ವಿಘ್ನೇಶ್ವರನಿಗೆ ಮತ್ತು ಅವನ ತಮ್ಮನ ಹೆಂಡತಿ ಅಕ್ರಮ ಸಂಬAಧ ಇರುವುದಾಗಿ ಯಮುನಾಳಿಗೆ ತಿಳಿದಿದೆ.
ಮದುವೇಯಾದ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಈ ಕುರಿತು ಮನೆಯಲ್ಲಿ ಕೇಳಿದ್ದಕ್ಕೆ ಯಮುನಾಳ ಗಂಡ ವಿಘ್ನೇಶ್ವರ, ಮೈದುನನ ಹೆಂಡತಿ ಶಾಮಲಾ ಗೌಡ, ಮೈದುನ ರವಿ ಗೌಡ ಮತ್ತು ಅತ್ತೆ ಸಾವಿತ್ರಿ ಎಲ್ಲರೂ ಸೇರಿ ಯಮುನಾಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾರಂಭಿಸಿದ್ದಾರೆ.
ಅಲ್ಲದೇ ಮನೆಯಲ್ಲಿ ಇರಬೇಡ ಎಲ್ಲಾದರೂ ಹೋಗಿ ಸಾಯಿ ಎಂದಿದ್ದಾರೆ. ಇದರಿಂದ ಮನನೊಂದ ಯಮುನಾ, ತನ್ನ ಮನೆಯಲ್ಲಿ ಪಕಾಸಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಮಹಜರು ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ ಉದಯ ಕುಂಬಾರ, ಪಿಎಸ್‌ಐ ಪ್ರವೀಣ ಕುಮಾರ, ಪ್ರೊಬೇಶನರಿ ಪಿಎಸ್‌ಐ ಸುನೀಲ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
Leave a Comment