ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ
ಯಲ್ಲಾಪುರ : ಸುಶಿಕ್ಷತರಾಗಿ, ಶಿಕ್ಷಣದಿಂದ ಸಬಲರಾಗಿರಿ ಎಂಬ ಧ್ಯೇಯದೊಂದಿಗೆ ಸಂಪೂರ್ಣ ಭಾರತವನ್ನು ಸುತ್ತವ ಮಾರ್ಗಮಧ್ಯ ಯಲ್ಲಾಪುರಕ್ಕೆ ಆಗಮಿಸಿದ್ದ ಬೈಕ್ ಸವಾರರನ್ನು ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದ ಬಳಿ ಬರಮಾಡಿಕೊಳ್ಳಲಾಯಿತು.
ಹುಬ್ಬಳ್ಳಿಯಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶಶಿಧರ ಮಡಿಯಾಳ್ ಹಾಗೂ ಅವರೊಡನೆ ವಿಶ್ವ ತಡಸೂರ್ ಎಂಬುವವರು ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೈಕ್ನಲ್ಲಿ ಸಂಪೂರ್ಣ ದೇಶವನ್ನು ಸುತ್ತುತ್ತಿದ್ದು, ಹುಬ್ಬಳ್ಳಿಯಿಂದ ಪ್ರಾರಂಭವಾದ ಅವರ ಸವಾರಿ ಇಂದಿಗೆ 109 ದಿನಗಳನ್ನು ಪೂರೈಸಿ ಯಲ್ಲಾಪುರಕ್ಕೆ ಆಗಮಿಸಿದ್ದರು.
ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ
ಈವರೆಗೆ ಭಾರತದ 27 ರಾಜ್ಯಗಳನ್ನು ಸುತ್ತಿರುವ ಅವರು 25 ಸಾವಿರಕ್ಕೂ ಅಧಿಕ ಕಿ.ಮಿ. ಸಂಚರಿಸಿದ್ದಾರೆ. ತಮ್ಮ ಪ್ರಯಾಣದ ಹಾದಿ ಮಧ್ಯ ಅವರು ಬಸವೇಶ್ವರರ, ಬಿ.ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧಿ, ಏ.ಪಿ.ಜೆ. ಅಬ್ದುಲ್ ಕಲಾಮ್ ಅವರ ಜನ್ಮ ಭೂಮಿಯನ್ನು, ಉತ್ತರಾಖಂಡದ ಚಾರ್ ಧಾಮ್, ದೇಶದ ಪ್ರಮುಖ ಸ್ಥಳಗಳನ್ನು ಸೇರಿದಂತೆ 7 ಅಂತರಾಷ್ಟ್ರೀಯ ಗಡಿಯನ್ನು, ದೇಶದ ವಿವಿಧ ದಿಕ್ಕಿನ 18 ಕೊನೆಯ ಗ್ರಾಮಗಳಿಗೆ ಭೇಟಿ ನೀಡಿರುತ್ತಾರೆ.
ಪಟ್ಟಣಕ್ಕೆ ಆಗಮಿಸಿದ್ದ ಸವಾರರನ್ನು ಬಿಕ್ಕು ಗುಡಿಗಾರ್ ಕಲಾ ಕೇಂದ್ರದ ಸಂತೋಷ ಗುಡಿಗಾರ, ಅರುಣ ಗುಡಿಗಾರ್, ಆದಿತ್ಯ ಗುಡಿಗಾರ್ ಹಾಗೂ ಮತ್ತಿತರರು ಸನ್ಮಾನಿಸಿದರು.
Leave a Comment