ಉಚಿತ ಟೈಪ್‌ರೈಟಿಂಗ್,ಕಂಪ್ಯೂಟರ್,ತರಬೇತಿ
ಕಾರವಾರ: ರೋಟರಿ ಕ್ಲಬ್ ಆಫ್ ಹಾಗೂ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಯುವಕ- ಯುವತಿಯರಿಗಾಗಿ ಮೂರು ತಿಂಗಳ ಟೈಪ್‌ರೈಟಿಂಗ್ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಪ್ರಸ್ತುತವಾಗಿ ಯಾವುದೇ ಶಾಲಾ- ಕಾಲೇಜಿಗೆ ಹೋಗುತ್ತಿರಬಾರದು. ಕೇವಲ 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಅಭ್ಯರ್ಥಿಗಳು ತಮ್ಮ ಎಸ್. ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಭಾವಚಿತ್ರ (ಪಾಸ್ ಪೋರ್ಟ ಸೈಜ್ ಫೋಟೊ)ಗಳೊಂದಿಗೆ ಡಿ.28ರೊಳಗಾಗಿ ರೋಟರಿ ಶತಾಭವನ, ಎಂ.ಜಿ.ರಸ್ತೆ, ಹೆ.ಪೋಸ್ಟ್ ಆಫೀಸ್ ಹತ್ತಿರ, ಕಾರವಾರ ವಿಳಾಸಕ್ಕೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಜ.02ರಿಂದ ತರಬೇತಿ ಪ್ರಾರಂಭಿಸಲಾಗುವುದು. ತರಬೇತಿಯ ಅವಧಿ ಪ್ರತೀ ದಿನ ಸಂಜೆ 4ರಿಂದ 5.30ರವರೆಗೆ ಇರುತ್ತದೆ (ಸರಕಾರಿ ರಜಾ ದಿನ ಹಾಗೂ ರವಿವಾರ ಹೊರತುಪಡಿಸಿ) ಹೆಚ್ಚಿನ ಮಾಹಿತಿಗಾಗಿ ಪ್ರಸನ್ನ ತೆಂಡೂಲ್ಕರ್ (ಮೊ: 9448236648) ರವರನ್ನು ಸಂಪರ್ಕಿಸಬಹುದು ಎಂದು ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು (ಮೊ.9766607857) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment