ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ
ಯಲ್ಲಾಪುರ: ಮಹಿಳೆಗೆ ಕುಟುಂಬ ಹಾಗೂ ಅವಳು ಯಾವದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅದಕ್ಕೆ ನ್ಯಾಯವೊದಗಿಸಿಕೊಡಬೇಕು ಎಂಬ ಮನೋಭಾವನೆ ಹಾಗೂ ಸಾಮರ್ಥ್ಯ ಎರಡು ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.ಅದಕ್ಕಾಗಿಯೇ ಅವಳನ್ನು ಭೂಮಿ ತೂಕದ ಹೆಣ್ಣು ಎಂಬುದು ಉತ್ಪೆçÃಕ್ಷೆಯಲ್ಲ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು. ಅವರು ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಸ್ತಿçà ಶಕ್ತಿಭವನದಲ್ಲಿ ಸೊರಬ ದ ಸುರಭಿ ಸೇವಾ ಚಾರೀಟೇಬಲ್ ಟ್ರಸ್ಟ ನ ಯಲ್ಲಾಪುರ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ
ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ
ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ಗಟ್ಟಿಗಿತ್ತಿ ಹೆಣ್ಣು.ಎಷ್ಟೆ ನೊಂದುಬೆAದರೂ ಹೊರಪ್ರಪಂಚಕ್ಕೆ ಗೊತ್ತಾಗದ ಹಾಗೆ ಉತ್ಸಾಹದ ಬುಗ್ಗೆಯಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಶಕ್ತಿಯಿರುವದು ಮಹಿಳೆಯರಲ್ಲಿದೆ. ಎಷ್ಟೇ ಮಹಿಳೆ ಪ್ರಬಲವಾಗಿದ್ದರೂ ಕೂಡ ದಿನನಿತ್ಯ ಅಲ್ಲಲ್ಲಿ ಕಂಡುಬರುವ ಅತ್ಯಾಚಾರದಂತಹ ಹೇಯ ಕೃತ್ಯ ಅವಳನ್ನು ಅಧೀüರಳನ್ನಾಗಿಸುತ್ತಿದೆ. ಆ ಹೀನ ವ್ಯಕ್ತಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಸಂಘಟನೆ ಶಕ್ತಿಯೊಂದಿಗೆ ಹೋರಾಡಬೇಕು ಎಂದರು. ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ ಮಾತನಾಡಿ .ಮಹಿಳಾಶಕ್ತಿ ಅಗಾಧವಾದ್ದು ನಮ್ಮ ನಡುವೆ ಇರುವ ಇಂತಹ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿದರೆ ಮತ್ತೊಬ್ಬರಿಗೆ ಮೇಲ್ಪಂಕ್ತಿ ಹಾಕಿದಂತಾಗಿ ಪ್ರೇರಣೆ ಸಿಗುತ್ತದೆ ಎಂದರು
ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸಮೂಹ ಸಂಪನ್ಮೂಲಧಿಕಾರಿ ಹೇಮಾ ಭಟ್ಟ, ಕವಿಯಿತ್ರಿ, ಶಿಕ್ಷಕಿ ಶೀವಲೀಲಾ ಹುಣಸಗಿ , ಪತ್ರಕರ್ತೆ ಪ್ರಭಾÀವತಿ ಗೋವಿ , ನೀರಿಗಾಗಿ ನಾನು ಎನ್ನುವ ಮಂಚೀಕೇರಿಯ ಸುಬ್ರಾಯ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಪಟ್ಟಣಪಂಚಾಯತ ಸಮೂಹ ಸಂಪನ್ಮೂಲಧಿಕಾರಿ ಹೇಮಾ ಭಟ್ ಮಾತನಾಡಿ ಇಲ್ಲಿಯ ಜನರ ಸಹಕಾರ ದಿಂದ ೨೪ ವರ್ಷಗಳ ಕಾಲ ಒಂದೇಡೆ ಕಾರ್ಯನಿರ್ವಹಿಸಲು ಸಾಧ್ಯವಾಗಿದ್ದು ,ಪಪಂ ನಿಂದ ಸಿಗಬೇಕಾದ ಸೌಲಭ್ಯ ಸಹಕಾರ ಮಾರ್ಗದರ್ಶನ ಸದಾ ನಿಮಗೆ ನೀಡಲು ಸಿದ್ಧ. ಈ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು
ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ
ಸನ್ಮಾನ ಸ್ವೀಕರಿಸಿ ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ ಮಹಿಳೆಯರಿಂದ ಮಹಿಳೆಯರು ಗೌರವಿಸಲ್ಪಟ್ಟಾಗ ಆಗುವ ಸಂತಸ ಅಷ್ಟಿಷ್ಟಲ್ಲ. ಮಹಿಳೆಯರು ಸಂಘಟನೆ ಮೂಲಕ ಬಲಗೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಮಗಿತ್ತ ಸನ್ಮಾನದಿಂದ ಇನ್ನು ಹೆಚ್ಚಿನ ಶ್ರದ್ಧೆಯಿಂದ ಕಾರ್ಯ ನಿರ್ವಹಿ¸ಲುಪ್ರೇರಕಶಕ್ತಿಯಾಗಿದೆಂದರು.
ಅರಬೈಲ್ ಸಹಿಪ್ರಾ ಶಿಕ್ಷಕಿ ಶೀವಲೀಲಾ ಹುಣಸಗಿ ಮಾತನಾಡಿ ಮಹಿಳೆ ಯಾವದೇ ಕೆಲಸ ಮಾಡಲು ಹಿಂಜರಿಯುವದಿಲ್ಲ. ಹೆಣ್ಣು ಮಕ್ಕಳು ಮೌನವಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಾಳೆ .ಕೆಲವೊಮ್ಮೆ ಪ್ರತಿಭಟನೆ ಮಾಡಿ ಖಂಡಿಸಿದರೆ ಅವಳನ್ನೆ ಹೊಣೆಗಾರಳನ್ನಾಗಿ ಮಾಡಿ ನಿನಗೇಕೆಬೇಕಿತ್ತು ಎಂಬ ಭಾವವನ್ನು ಕುಟುಂಬದ ಮತ್ತು ಸಮಾಜದಲ್ಲಿ ಅವಳು ಎದುರಿಸುವ ಪ್ರಸಂಗಗಳಿವೆ.
ಆದರೂ ಅದನ್ನೇಲ್ಲಾ ಮೆಟ್ಟಿ ನಿಂತು ತನ್ನಧೆ ಪರಿಧಿಯಲ್ಲಿ ಗಟ್ಟಿತನದಿಂದ ಮುನ್ನಡೆಯುವ ಕೆಚ್ಚು ಅವಳಲ್ಲಿದೆ. ತಾರತಮ್ಯ ಮಾಡದೇ ಅವಳನ್ನು ಗೌರವಿಸಿ ಇಂತಹ ಸಂಘಟನೆಗಳು ನೊಂದವರ ದನಿಯಾಗಲಿ ಎಂದರು. ವಿಕಾಸ ಬ್ಯಾಂಕ ಅಧ್ಯಕ್ಷ ಮುರುಳಿ ಹೆಗಡೆ ,ನಾಗರೀಕ ವೇದಿಕೆ ಅಧ್ಯಕ್ಷ ರಾಮುನಾಯ್ಕ ಘಟಕದ ತಾಲೂಕಾಧ್ಯಕ್ಷೆ ರೂಪಾ ಪಾಠಣಕರ ಮಾತನಾಡಿದರು,ಉದ್ಯಮಿ ಬಾಲಕೃಷ್ಣ ನಾಯಕ ,ಪಟ್ಟಣ ಪಂಚಾಯತ ಸದಸ್ಯ ಜನಾರ್ಧನ ಪಾಠಣಕರ .ಮಹಿಳಾ ಘಟಕದ ರಾಜ್ಯಧ್ಯಕ್ಷೆÀ ವಾಣಿಶ್ರೀ ವೇದಿಕೆಯಲ್ಲಿದ್ದರು.
ಸುರಭಿ ಟ್ರಸ್ಟ ಸಂಸ್ಥಾಪಕ ಎಸ್ .ಜಿ ರಾಮಚಂದ್ರ ಪ್ರಸ್ತಾವಿಕ ಮಾತನಾಡಿದರು. ಮಾಲಾ ಬಾಲೆಹೊಸೂರು ಸ್ವಾಗತಿಸಿದರು. ಶ್ರೀನಿಧಿ ಮೊರಸ್ಕರ ನಿರ್ವಹಿಸಿದರು. ಗೌರವಾಧ್ಯಕ್ಷೆ ಪುಷ್ಪಾ ಜೋಗಾರಶೇಟ್ಟರ, ದಾಂಡೇಲಿ ತಾಲೂಕಾದ್ಯಕ್ಷೆ ಲಲಿತಾ ಪಾಠಣಕರ , ಕಾರ್ಯದರ್ಶಿ ಜಯಾ ನಾಯ್ಕ ಸೇರಿದಂತೆ ೨೧ ನಿರ್ದೇಶಕರು ಉಪಸ್ಥೀತರಿದ್ದರು
Leave a Comment