ಜಾಲತಾಣದ ಮೂಲಕ ವೇಶ್ಯಾವಾಟಿಕೆ : ಬಂಧನ
ಬೆಂಗಳೂರು : ಜಾಲತಣಗಳಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮAಜುನಾಥ ಅಲಿಯಾಸ್ ಸಂಜು, ಮಂಜುನಾಥ ಅಲಿಯಾಸ್ ಬುಲೆಟ್, ಮಲ್ಲಿಕಾರ್ಜುನಯ್ಯ, ಹನುಮೇಶ್, ಮೋಹನ್ ಹಾಗೂ ರಾಜೇಶ್ ಬಂಧಿತರು.
ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ನಗರಕ್ಕೆ ಯುವತಿಯರನ್ನು ಕರೆಸುತ್ತಿದ್ದ ಆರೋಪಿಗಳು, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಇರಿಸುತ್ತಿದ್ದರು. ಅವರ ಭಾವಚಿತ್ರಗಳ ಸಮೇತ ಜಾಲತಾಣಗಳಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ವೇಶ್ಯಾವಾಟಿಕೆ ಆಕರ್ಷಿಸುತ್ತಿದ್ದರು, ಎಂದು ಪೊಲೀಸರು ಹೇಳಿದರು.
ಗ್ರಾಹಕರು ಹೇಳಿದ ಸ್ಥಳದಲ್ಲಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಆರೋಪಿಗಳು, ಕಮಿಷನ್ ರೂಪದಲ್ಲಿ ಹಣ ಪಡೆಯುತ್ತಿದ್ದರು. ಜೊತೆಗೆ ಕೆಲ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನೂ ಆರೋಪಿಗಳು ಸೃಷ್ಟಿಸಿದ್ದ ರೆಂಬುದು ತನಿಖೆಯಿಂದ ಗೊತ್ತಾಗಿದೆ. ಜಾಲದಲ್ಲಿ ಸಿಲುಕಿದ್ದ ಮಹಿಳೆಯರನ್ನು ರಕ್ಷಿಸಲಾಗಿದೆ. ಎಂದು ಅವರು ಹೇಳಿದರು ಎಂದರು.
Leave a Comment