ಪ್ರೇಮ ವೈಫಲ್ಯಕ್ಕೆ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ : ಹಿಂದೂ ಮುಖಂಡ ನಿತೇಶ್ ಬಂಧನ
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿಂದೂಪರ ಸಂಘಟನೆ ಮುಖಂಡ ಆರೋಪಿ ನಿತೇಶ್ ಹಾಗೂ ಆತನ ಪ್ರೇಯಸಿ ಇಬ್ಬರು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಜಗಳವಾಗಿ ಮನನೊಂದು ಅಪ್ರಾಪ್ತ ಯುವತಿ ಜನವರಿ 10 ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು.
ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಕುರಿತು ಯುವತಿ ಬರೆದಿಟ್ಟಿದ್ದ ಡೆತ್ ನೋಟ್ ಆಧಾರದ ಮೇಲೆ ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.
ಯುವತಿ ಸಾಯುವ ಮುನ್ನ ಆಸ್ಪತ್ರೆ ಬೆಡ್ ಮೇಲೆ ಸಾವಿನ ಬಗ್ಗೆ ಡೆತ್ ನೋಡ್ ಬರೆದು ನಿತೇಶ್ ವಿರುದ್ಧ ಆರೋಪಿಸಿದ್ದಳು. ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿ ನಿತೇಶ್ ಇದೀಗ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಲ್ಲಿ ಕುದುರೆಮುಖ ಪೊಲೀಸರ ಕೈಹೆ ಸಿಕ್ಕಿದ್ದಾನೆ.
Leave a Comment