ಹೊನ್ನಾವರ ಬ್ಲಾಕ್ ಕಾಂಗ್ರೆಸ್ನಿಂದ ಮನೆಮನೆ ಪ್ರಚಾರ
ಹೊನ್ನಾವರ : ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ನೇತ್ರತ್ವದಲ್ಲಿ ಇಂದು ಹೊನ್ನಾವರ ಪಟ್ಟಣದ 198ನೇ ಮತಗಟ್ಟೆ ಕೆಳಗಿನ ಪಾಳ್ಯಾ ಪ್ರದೇಶದಲ್ಲಿ ಪ್ರತಿ ಮನೆಮನೆಗೆ ತೆರಳಿ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾರವರ ಪರ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಉದಯ ಮೇಸ್ತ, ಬಿ.ಸಿ.ಸಿ. ಕಾರ್ಯದರ್ಶಿ ಬ್ರಾಜಿಲ್ ಪಿಂಟೊ, ರೋಹಿತ್ ಮೇಸ್ತ,ಶ್ರೀಮತಿ ಜ್ಯೋತಿ ಮಹಾಲೆ ಮತ್ತು ಹಲವಾರು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Leave a Comment