ಗೃಹಜೋತಿ ಯೋಜನೆಗೆ ಹೇಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು gruha jyothi scheme Apply online 2023
ಗೃಹ ಜ್ಯೋತಿ ಯೋಜನೆ (Gruha Jyoti Scheme ) ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಹೇಗೆ ಅರ್ಜಿಯನ್ನು ಸಲ್ಲಿಸುವುದು, ಬೇಕಾಗುವ ದಾಖಲೆಗಳು ಮತ್ತು ಷರತ್ತುಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಗೃಹ ಜ್ಯೋತಿ (Gruha Jyothi Scheme) ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಗೃಹ ಬಳಕೆಯ ವಿದ್ಯುತ್ ಉಚಿತ ನೀಡುವ ಯೋಜನೆ .
ಗೃಹ ಜ್ಯೋತಿ” (Gruha Jyoti Scheme) ಷರತ್ತುಗಳು ;
- ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ ಒಂದು ಮಿಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.
- ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಲಾಗುವುದು.
- ಗೃಹ ಜ್ಯೋತಿ” (Gruha Jyothi Scheme) ಯೋಜನೆಯು ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ. ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ
- ಅರ್ಹ ಯೂನಿಟ್ / ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು
- ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ | ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
- ಫಲಾನುಭವಿಯು ತನ್ನ Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು
ಗೃಹಜೋತಿ ಯೋಜನೆಗೆ ಹೇಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು gruha jyothi scheme apply online 2023
ಸೇವಾ ಸಿಂಧು ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ;
ಗೃಹ ಜ್ಯೋತಿ” ಯೋಜನೆ ಅಡಿಯಲ್ಲಿ ಉಚಿತ ಸೌಲಭ್ಯ ಪಡೆಯಲು ಕೇಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್ https://sevasindhugs.karnataka.gov.in/ ಮೇಲೆ ಕ್ಲಿಕ್ ಮಾಡಿ.
- ಗೃಹ ಜ್ಯೋತಿ’ ಎಂದು ನಮೂದಿಸಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- • ಮುಂದಿನ ಲಿಂಕ್‌ನಲ್ಲಿ “ಗೃಹ ಜ್ಯೋತಿ” Gruha Jyoti Scheme ಆನ್‌ಲೈನ್ ಅರ್ಜಿ
ಸಿಗುತ್ತದೆ.
ನಂತರ ಅಲ್ಲಿ ಎಸ್ಕಾಂ ಹೆಸರು, Account ID/Connection ID, ನಿಮ್ಮಹೆಸರು, ವಿಳಾಸ (ವಿದ್ಯುತ್ ಬಿಲ್ನಲ್ಲಿರುವಂತೆ/ ಎಸ್ಕಾಂ ನಲ್ಲಿರುವಂತೆ), ನಂತರ ನೀವು ಮಾಲಿಕರ ಅಥವಾ ಬಾಡಿಗೆದಾರರ ಎನ್ನುವುದನ್ನು ನಮೂದಿಸಬೇಕು, ನಿಮ್ಮ ಆಧಾರ ಸಂಖ್ಯೆ ಆಧಾರ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ನಿಮ್ಮಮೊಬೈಲ್ ನಂಬರ್‌ನ್ನು ಅಲ್ಲಿ ಭರ್ತಿ ಮಾಡಬೇಕು.
• | Agree ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
Word verification ಅಂತ ಇರುವಲ್ಲಿ ಅಲ್ಲಿ ಕಾಣುವ ನಂಬರ್‌ನ್ನು ಕೇಳಗೆ ನೀಡಿರುವ ಬಾಕ್ಸನಲ್ಲಿ ತುಂಬಬೇಕು. ನಂತರ
Submit ಮೇಲೆ ಕ್ಲಿಕ್ ಮಾಡಿ.
ಪ್ರಮುಖ ಲಿಂಕ್‌ಗಳು;
ಗೃಹ ಜ್ಯೋತಿ Gruha Jyoti Scheme ಅರ್ಜಿ ಸಲ್ಲಿಸಲು / apply link; https://sevasindhugs.karnataka.gov.in/
Leave a Comment