ಮಹಾಬಲೇಶ್ವರ ಹೆಗಡೆ ನಿಧನ
ಹೊನ್ನಾವರ: ತಾಲೂಕಿನ ಸಣ್ಣನೆ ಗ್ರಾಮದ ಮಹಾಬಲೇಶ್ವರ ವೆಂಕಟರಮಣ ಹೆಗಡೆ . (56) ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ‘ರಾದರು. ಮೃತರು ಅವಿವಾಹಿತರಾಗಿದ್ದು, 4 ಜನ ಸಹೋದರರು, 3 ಜನ ಸಹೋದರಿಯರನ್ನು ಅಗಲಿದ್ದಾರೆ.
ಕಳೆದ ಮೂವತ್ತೈದು ವರ್ಷಗಳ ಹಿಂದೆ ಬೆಂಗಳೂರು ಸೇರಿದ ವೆಂಕಟರಮಣ ಹೆಗಡೆ ಅವರು ತಮ್ಮದೇ ಆದ ಪ್ರಸನ್ನ ಐಸ್ ಕ್ರೀಂ ಉದ್ದಿಮೆ ನಡೆಸಿ ನೂರಾರು ಉದ್ಯೋಗಿಗಳಿಗೆ ಆಶ್ರಯವನ್ನು ನೀಡಿದ್ದರು, ಹೊಸಾಕುಳಿ ಪಂಚ ಗಾಮದ ಯಾವುದೇ ಯುವಕರು ಶಿಕ್ಷಣಕ್ಕೆ, ಉದ್ಯೋಗಕ್ಕೆ ಬೆಂಗಳೂರು ತೆರಳಿದವರಿಗೆ ಉಚಿತ ಆಶ್ರಯ ನೀಡಿ ಮಾಬ್ದಣ್ಣನಾಗಿ ಸಹಾಯ ಮಾಡುತ್ತಿದ್ದರು.
ಅವರಿಂದ ಸಹಾಯ ಪಡೆದವರು ಉನ್ನತ ಹುದ್ದೆಗೆ ಏರಿದವರು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
Leave a Comment