ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಉಚಿತ ಊಟೋಪಾಹಾರ ವ್ಯವಸ್ಥೆ ಭಟ್ಕಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳರಿಂದ ಚಾಲನೆ
ಭಟ್ಕಳ: ತಾಲೂಕಾ ಆಸ್ಪತ್ರೆಯಲ್ಲಿ ದಾಖಲಾದ ಒಳರೋಗಿಗಳಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನ, ರಾತ್ರಿ ಊಟ ನೀಡುವ ವ್ಯವಸ್ಥೆಗೆ ಶನಿವಾರ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚು ಬರುತ್ತಿದ್ದು, ಒಳರೋಗಿಯಾಗಿ ದಾಖಲಾದವರಿಗೆ ಅನುಕೂಲವಾಗಲು ಉಚಿತವಾಗಿ ಊಟ, ಉಪಾಹಾರ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಹೊನ್ನಾವರದಲ್ಲಿ ಈಗಾಗಲೇ ರೋಗಿಗಳಿಗೆ ಊಟ, ಉಪಾಹಾರ ನೀಡಲು ಸೂಚಿಸಲಾಗಿದೆ. ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲೂ ಒಳರೋಗಿಗಳಿಗೆ ಉಚಿತವಾಗಿ ಊಟೋಪಾಹಾರ ಸಿಗುವಂತಾಗಬೇಕು.
ಇದರಲ್ಲಿ ಯಾವುದೇ ರಾಜಕೀಯ ಮಾಡುವುದು ಸರಿಯಲ್ಲ. ಗುಣಮಟ್ಟದ ಆಹಾರವನ್ನು ಯಾರು ವಿತರಿಸುತ್ತಾರೋ ಮುಂದಿನ ದಿನಗಳಲ್ಲಿ ಅವರಿಗೆ ಟೆಂಡರ್ ಕೊಡಲು ಸಹ ಸೂಚಿಸಲಾಗಿದೆ ಎಂದ ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದವರಿಗೆ ಹೊರಗಿನಿಂದ ಔಷಧಿ ತರಲು ಚೀಟಿ ಕೊಡಬಾರದು. ಸರಕಾರಿ ಆಸ್ಪತ್ರೆಗೆ ಹೆಚ್ಚು ಬಡವರೇ ಬರುತ್ತಾರೆ. ಅಂತಹವರಿಗೆ ಹೊರಗಿನಿಂದ ಔಷಧ ತರುವಂತೆ ಚೀಟಿ ಕೊಟ್ಟರೆ ಅವರಿಗೆ ಕಷ್ಟವಾಗಲಿದೆ. ಹೀಗಾಗಿ ಯಾವುದೇ ವೈದ್ಯರು ರೋಗಿಗಳಿಗೆ ಹೊರಗಿನಿಂದ ಔಷಧ ತರುವಂತೆ
ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಉಚಿತ ಊಟೋಪಾಹಾರ ವ್ಯವಸ್ಥೆ ಭಟ್ಕಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳರಿಂದ ಚಾಲನೆ
ಚೀಟಿ ಕೊಡಬಾರದು. ಸರಕಾರಿ ಆಸ್ಪತ್ರೆಯಲ್ಲಿನ ಔಷಧಿಯೇ ಕೊಡುವಂತಾಗಬೇಕು. ಸರಕಾರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ಸೌಲಭ್ಯ ವಿತರಿಸಲು ಸಿದ್ಧವಿದೆ ಎಂದರು.
ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ವ್ಯವಸ್ಥೆಗಳಿದ್ದರೂ ಲ್ಯಾಬ್ ಟೆಕ್ನಿಷಿಯನ್ ಇಲ್ಲ. ಇದರಿಂದ ಬಡರೋಗಿಗಳಿಗೆ ರಕ್ತ ತಪಾಸಣೆಗೆ ತೊಂದರೆಯಾಗುತ್ತಿದೆ ಎಂದು ಡಾ. ಸವಿತಾ ಕಾಮತ್ ಸಚಿವರ ಗಮನಕ್ಕೆ ತಂದಾಗ ಸಚಿವರು ಸ್ಥಳಂದಿಲೇ ಡಿಹೆಚ್ ಓಗೆ ಕರೆ ಮಾಡಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆ ಭರ್ತಿಗೊಳಿಸುವಂತೆ ಸೂಚಿಸಿದರು. ಡಾ. ಲಕ್ಷ್ಮೀಶ ನಾಯ್ಕ, ಡಾ. ಸತೀಶ, ಡಾ. ಸುರಕ್ಷಿತ ಶೆಟ್ಟಿ, ಡಾ. ಕಮಲಾ ನಾಯಕ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಉಚಿತ ಊಟೋಪಾಹಾರ ವ್ಯವಸ್ಥೆ ಭಟ್ಕಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳರಿಂದ ಚಾಲನೆ
ಹಿಂದೆಯೂ ಆಸ್ಪತ್ರೆಯಲ್ಲಿ ಉಚಿತ ಊಟ ಮತ್ತು ಉಪಾಹಾರ ನೀಡಲಾಗುತ್ತಿತ್ತು. ಆದರೆ ಕಾರಣಾಂತರದಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಚಿವ ಮಂಕಾಳ ವೈದ್ಯ ಅವರು ಬಳಿ ಚರ್ಚಿಸಿ ಅವರ ಸೂಚನೆಯಂತೆ ರೋಗಿಗಳಿಗೆ ಊಟ, ಉಪಾಹಾರ ನೀಡಲು ಚಾಲನೆ ನೀಡಲಾಗಿದೆ.
—ಡಾ. ಸವಿತಾ ಕಾಮತ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ
Leave a Comment