ದೂಧಸಾಗರ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು;ಬಸ್ಕಿ ಹೊಡೆಸಿದ ಗೋವಾ ಪೊಲೀಸರು 2023
ಗೋವಾ-ಕರ್ನಾಟಕ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳಿಂದ ಹಾಲಿನಂತೆ ಧುಮ್ಮಿಕ್ಕುವ ವಿಶ್ವವಿಖ್ಯಾತ ದೂಧಸಾಗರ ಜಲಪಾತಕ್ಕೆ ಗೋವಾದ ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಪ್ರವೇಶ ನಿಷೇಧಿಸಿದೆ. ಪ್ರವಾಸಿಗರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ, ಈ ಜಲಪಾತದ ಆಕರ್ಷಕ ನೋಟವನ್ನು ನೋಡಲು
ಪ್ರತಿದಿನ ಸಾವಿರಾರು ಪ್ರವಾಸಿಗರು ದೂಧಸಾಗರ ರೈಲು ನಿಲ್ದಾಣಕ್ಕೆ ಬಂದು ಹಿಂತಿರುಗುತ್ತಾರೆ.
ದೂಧಸಾಗರ ಜಲಪಾತ ನೋಡಲು ಬಂದಿದ್ದ 2000ಕ್ಕೂ ಹೆಚ್ಚು ಪ್ರವಾಸಿಗರನ್ನು ದೂಧಸಾಗರ ರೈಲ್ವೆ ಹಳಿಯಲ್ಲಿ ಪೊಲೀಸರು ಭಾನುವಾರ ಬೆಳಿಗ್ಗೆ ತಡೆದಿದ್ದರಿಂದ ಪ್ರವಾಸಿಗರು ರೈಲ್ವೆ ಹಳಿಯ ಮೇಲೆ ನಿಂತಿದ್ದರಿಂದ ಕೆಲಕಾಲ ರೈಲ್ವೆ ಹಳಿಯು ಪ್ರವಾಸಿಗರಿಂದ ತುಂಬಿಕೊಂಡು ಬಂದ್ ಆಗಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರವಾಸಿಗರನ್ನು ತಡೆಯಲು ವಾಸ್ಕೋ ರೈಲ್ವೆ ಪೊಲೀಸರ ತಂಡವನ್ನು ಕರೆಯಿಸಿ ಬಸ್ಕಿ ತೆಗೆಯುವಂತೆ ಶಿಕ್ಷಿಸಿದರು.
ದೂಧಸಾಗರ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು;ಬಸ್ಕಿ ಹೊಡೆಸಿದ ಗೋವಾ ಪೊಲೀಸರು 2023
ಭಾನುವಾರ ರಜಾದಿನವಾಗಿದ್ದರಿಂದ ಎರಡು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಮುಂಜಾನೆಯಿಂದಲೇ ಈ ಪ್ರವಾಸಿ ತಾಣಕ್ಕೆ ಆಗಮಿಸುತ್ತಿದ್ದರು. ಆದರೆ ಅಲ್ಲಿ ರೈಲ್ವೆ ಪೊಲೀಸರು ಈ ಪ್ರವಾಸಿಗರನ್ನು ದೂಧಸಾಗರ ಜಲಪಾತಕ್ಕೆ ಹೋಗದಂತೆ ತಡೆದರು ಮತ್ತು ಅದನ್ನು ನಿಷೇಧಿಸಲಾಗಿದೆ ಎಂದು
ಹಿಂತಿರುಗುವಂತೆ ಸೂಚಿಸಿದ್ದರಿಂದ ಪ್ರವಾಸಿಗರು ರೈಲ್ವೆ ಹಳಿ ಮೇಲೆ
ತಂಗಿದ್ದರು. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರವಾಸಿಗರನ್ನು ತಡೆಯಲು ವಾಸ್ಕೋ ರೈಲ್ವೆ ಪೊಲೀಸರ ತಂಡವನ್ನು ಕರೆಯಿಸಿ ಬಸ್ಕಿ ತೆಗೆಯುವಂತೆ ಶಿಕ್ಷಿಸಿ ಮರಳಿಸಿದರು. ಇದರಿಂದಾಗಿ ಪ್ರವಾಸಿಗರಿಂದ ತುಂಬಿಕೊಂಡಿದ್ದ ರೈಲು ಹಳಿ ಕೆಲಕಾಲ ಬಂದ್ ಆಗಿತ್ತು.
ದೂಧಸಾಗರ ಜಲಪಾತ ಪ್ರವಾಸೋದ್ಯಮ ಪ್ರತಿ ವರ್ಷವೂ ಜೂನ್ 10 ರಿಂದ ಪ್ರಾರಂಭವಾಗುತ್ತದೆ. ಈ ವರ್ಷ ಜುಲೈ ಅರ್ಧ ಮುಗಿದರೂ ಅರಣ್ಯ ಇಲಾಖೆ ದೂಧಸಾಗರ ಜಲಪಾತದ ಪ್ರವೇಶ ನಿಷೇಧವನ್ನು ಇನ್ನೂ ತೆರವುಗೊಳಿಸಿಲ್ಲ. ಮತ್ತು ಇದರ ಹಿಂದಿನ ಕಾರಣವನ್ನು ಅರಣ್ಯ ಇಲಾಖೆ ಸ್ಪಷ್ಟಪಡಿಸಿಲ್ಲ.
ಕರ್ನಾಟಕ ಮತ್ತು ಇತರ ರಾಜ್ಯಗಳ ಪ್ರವಾಸಿಗರಿಗೆ ದೂಧಸಾಗರ ಜಲಪಾತಕ್ಕೆ ಹೋಗುವುದನ್ನು ನಿಷೇಧಿಸಿರುವ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ ಸಾವಿರಾರು ಪ್ರವಾಸಿಗರು ಪ್ರತಿದಿನ 3.30 ಗಂಟೆಗೆ ಯಶವಂತಪುರ ಬೆಂಗಳೂರು-ಗೋವಾ ರೈಲಿನಿಂದ ಮತ್ತು ನಿಜಾಮುದ್ದೀನ್ ದೆಹಲಿ- ಗೋವಾ ರೈಲಿನಿಂದ ಪ್ರತಿದಿನ ಮುಂಜಾನೆ 4 ಗಂಟೆಗೆ ದೂಧಸಾಗರ ರೈಲು ನಿಲ್ದಾಣಕ್ಕೆ ಆಗಮಿಸುತ್ತಾರೆ. ಆ ವೇಳೆಯಲ್ಲಿ ರೈಲ್ವೆ ಪೊಲೀಸರು ಜಲಪಾತ ನೋಡಲು ತಡೆದಿದ್ದರಿಂದ ನಿರಾಸೆಯಿಂದ ದೂಧಸಾಗರ ಜಲಪಾತ ನೋಡದೆ ಗೋವಾದ ಕುಳೆ ರೈಲು ನಿಲ್ದಾಣದವರೆಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲಿಂದ ಮತ್ತೆ ಸಂಜೆ ರೈಲಿನಲ್ಲಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾರೆ. ಜಲಪಾತ ನೋಡಲು ನಿಷೇಧ ಹೇರಿರುವ ಮಾಹಿತಿ ಪ್ರವಾಸಿಗರಿಗೆ ತಲುಪದ ಕಾರಣ ಪ್ರವಾಸಿಗರು ಪ್ರತಿದಿನವೂ ಇಲ್ಲಿಯವರೆಗೆ ಬಂದು ಪರದಾಡುವಂತಾಗಿದೆ.
Leave a Comment