ಆಕ್ಷೇಪಣೆ ಆಹ್ವಾನ;ಗ್ರಾಮ ಆಡಳಿತ ಅಧಿಕಾರಿ ಆಯ್ಕೆ ಪಟ್ಟಿ ಪ್ರಕಟ-2025
ಆಕ್ಷೇಪಣೆ ಆಹ್ವಾನ;ಗ್ರಾಮ ಆಡಳಿತ ಅಧಿಕಾರಿ ಆಯ್ಕೆ ಪಟ್ಟಿ ಪ್ರಕಟ-2025;ಉತ್ತರಕನ್ನಡ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 2 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ತಾತ್ಕಾಲಿಕ ಹೆಚ್ಚುವರಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ಜಿಲ್ಲಾ ವೆಬ್ ಸೈಟ್ನಲ್ಲಿ ಪ್ರಚುರಪಡಿಸಿ ಆಕ್ಷೇಪಣೆಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜ.23 ರಂದು ಸಂಜೆ 5.30 ಗಂಟೆಯೊಳಗಾಗಿ ಲಿಖಿತ ರೂಪದಲ್ಲಿ ಆಕ್ಷೇಪಣೆಯನ್ನು ಸಮರ್ಥಿಸುವ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳು ಉತ್ತರಕನ್ನಡ ಜಿಲ್ಲೆ ಕಾರವಾರರವರಿಗೆ ಸಲ್ಲಿಸತಕ್ಕದ್ದು. ಇಮೇಲ್ ಮುಖಾಂತರ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಆಯ್ಕೆಪಟ್ಟಿಯಲ್ಲಿ ಹೆಸರು ಸೇರ್ಪಡೆ ಇದ್ದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ನೇಮಕಾತಿಯ ಬಗ್ಗೆ ಯಾವುದೇ ಹಕ್ಕು ಪ್ರಾಪ್ತಿಯಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ : http://uttarakannada.nic.in ಮೂಲಕ ಅಥವಾ ಕಚೇರಿ ದೂರವಾಣಿ ಸಂಖ್ಯೆ 08382-229857/222072ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment