ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದಲ್ಲಿ ಅರ್ಜಿ ಆಹ್ವಾನ 2025
ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ/ಗೃಹರಕ್ಷಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ನೇಮಕಾತಿ ಸಂಸ್ಥೆ ; ಗೃಹರಕ್ಷಕ ದಳ ಸಂಸ್ಥೆ
ಹುದ್ದೆ ಹೆಸರು; ಸ್ವಯಂ ಸೇವಕ ಗೃಹರಕ್ಷಕ/ಗೃಹರಕ್ಷಕಿ
ಹುದ್ದೆಗಳ ಸಂಖ್ಯೆ ; 140
ಉದ್ಯೋಗ ಸ್ಥಳ ; ಉತ್ತರ ಕನ್ನಡ
ಅರ್ಹತೆಗಳು: 10ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಠ 19ರಿಂದ 50 ವರ್ಷದೊಳಗಿರಬೇಕು. ಕನಿಷ್ಠ ಪುರುಷ 163 ಸೆ.ಮೀ, ಮಹಿಳೆ 150 ಸೆ.ಮೀ ಎತ್ತರವಿರಬೇಕು. ಅಭ್ಯರ್ಥಿಯು ಯಾವುದೇ ಅಪರಾಧಿಕ/ರಾಜಕೀಯ ಹಿನ್ನೆಲೆ ಹೊಂದಿರಬಾರದು.
ಅರ್ಜಿ ಭರ್ತಿ ಮಾಡಿ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಆಧಾರ್ ಕಾರ್ಡ್ ಪ್ರತಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನಕಲು ಪ್ರತಿ ಮತ್ತು ತಾಲೂಕಾ ವೈದ್ಯಾಧಿಕಾರಿಗಳಿಂದ ಪಡೆದ ದೈಹಿಕ ಸದೃಢತೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಮಾ. 7 ರೊಳಗಾಗಿ ಸಲ್ಲಿಸಬೇಕು.
ಕೌಶಲ್ಯ ತರಬೇತಿ (ಕಂಪ್ಯೂಟರ್ ಜ್ಞಾನ, ಹೆವಿ ಡೈವಿಂಗ್ ಲೈಸೆನ್ಸ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್ ಮತ್ತು ಪ್ಲಂಬರ್), ಎನ್.ಸಿ.ಸಿ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡಲಾಗುವುದು.
ಸೂಚನೆ: ಗೃಹರಕ್ಷಕ ದಳ ಸಂಸ್ಥೆಯು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಇದು ಖಾಯಂ ನೌಕರಿಯಾಗಿರುವುದಿಲ್ಲ ಮತ್ತು ಯಾವುದೇ ರೀತಿಯ ಮಾಸಿಕ ಸಂಬಳ/ ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ. ಸರ್ಕಾರವು ನಿಗದಿ ಪಡಿಸಿರುವ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಕಾರವಾರ, ದೂರವಾಣಿ ಸಂಖ್ಯೆ: 08382-200137 5 9480898775 ಗೃಹರಕ್ಷಕ ದಳದ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಅರ್ಜಿ ಸಲ್ಲಿಸುವುದು ಹೇಗೆ ;
ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಅರ್ಹ ಅಭ್ಯರ್ಥಿಗಳು ಫೆ.7 ರಿಂದ ಮಾ.7 ರವರೆಗೆ ಜಿಲ್ಲಾ ಸಮಾದೇಷ್ಟರ ಕಚೇರಿ, ಗೃಹರಕ್ಷಕ ದಳ, ಸರ್ವೋದಯ ನಗರ ದಿವೇಕರ್ ಕಾಮರ್ಸ್ ಕಾಲೇಜು ಎದುರಿಗೆ, ಕೋಡಿಬಾಗ, ಕಾರವಾರ 10ನೇ ತರಗತಿಯ ಅಂಕಪಟ್ಟಿ ದೃಢೀಕೃತ ಪ್ರತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ತೋರಿಸಿ ಉಚಿತವಾಗಿ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ;7-3-2025 |
Leave a Comment