ಹೊನ್ನಾವರ :
ಹೊನ್ನಾವರ ತಾಲೂಕಿನ ಕರ್ಕಿಯ ಭೂಸ್ವರ್ಗಕೇರಿಯಲ್ಲಿ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಬುದ್ಧಿಮಾಂದ್ಯ ಅಪ್ರಾಪ್ತೆಯೊಂದಿಗೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ(52) ಅತ್ಯಾಚಾರಗೈದ ಆರೋಪಿ. ಈತ ಕರ್ಕಿಯ ಮೀನು ಮಾರ್ಕೆಟ್ ಸಮೀಪ ನ್ಯೂ ರೂಪ್ ಎಂಬ ಹೆಸರಿನ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ. ತನ್ನ ಬಟ್ಟೆ ಹೊಲಿಸಲೆಂದು ಆತನ ಅಂಗಡಿಗೆ ಬರುತ್ತಿದ್ದ 17 ವರ್ಷದ ಬುದ್ಧಿ ಮಾಂದ್ಯ ಬಾಲಕಿಯ ಮನವೊಲಿಸಿ ಅನೇಕ ಬಾರಿ ಅತ್ಯಾಚಾರವೆಸಡಗಿದ್ದಾನೆ. ಬಾಲಕಿಗೆ ಅನಾರೋಗ್ಯವಿರುವುದನ್ನು ಗಮನಿಸಿದ ಮನೆಯವರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದಿದ್ದಾರೆ. ಬಾಲಕಿಯ ಚಿಕಿತ್ಸೆಯ ವೇಳೆ ಈಕೆಯ ಮೇಲೆ ಅತ್ಯಾಚಾರವಾಗಿರುವುದು ಕಂಡುಬಂದಿದ್ದು, ಬಾಲಕಿ ತುಂಬು ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಈ ಪ್ರಕರಣ ಈಗ ಹೊನ್ನಾವರ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದು, ಆರೋಪಿ ಸುಬ್ರಹ್ಮಣ್ಯ ರಾಮ ಭಂಡಾರಿ ಟೈಲರಿಂಗ್ ಅಂಗಡಿ ಬಂದ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.
ಪಿ ಎಸ್ ಐ ಆನಂದಮೂರ್ತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
-gaju
Leave a Comment