ಗೋಕರ್ಣ:
ಗೋವಾ ರಾಜ್ಯದ ಕ್ಯಾಬಿನೆಟ್ ಸಚಿವರಾದ ಶ್ರೀ ವಿನೋದ ಪಾಲೇಕರ್ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು . ಶ್ರೀ ಅರುಣ ನಾಡಕರ್ಣಿ ಉಪಸ್ಥಿತರಿದ್ದರು . ಪೂಜೆಯ ನಂತರ ಸಚಿವರು ಶ್ರೀ ದೇವಾಲಯದ ಗೋಶಾಲೆಗೆ ಭೇಟಿ ನೀಡಿದರು.
✍? *ಪುಷ್ಪಹಾಸ ಬಸ್ತಿಕರ
Leave a Comment