ಭಟ್ಕಳ:
ನಗರ ಸೇರಿದಂತೆ ತಾಲೂಕಿನ ಹಲವು ಭಾಗಗಲ್ಲಿ ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣ ಗೊಂಡಿದ್ದು ಜನರು ನೀರಿಗಾಗಿ ಹಪಹಪಿಸುತ್ತಿದ್ದಾರೆ ತಾಲೂಕಾ ಆಡಳಿತ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸ ಬೇಕು ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಆಗ್ರಹಿಸಿದೆ.
ನಿಯೋಗವು ತಹಸೀಲ್ದಾರ್ ವಿ.ಎನ್. ಬಾಡಕರ್ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿ ನಗರದ ಹನೀಫಾಬಾದ್, ಉಮರ್ ಸ್ಟ್ರೀಟ್, ಮದಿನಾ ಕಾಲೋನಿ, ಚೌಥನಿ, ಕುದುರೆ ಬೀರಪ್ಪ ರಸ್ತೆ, ಜಾಲಿ ರೋಡ್ ಬೆಂಡೆಕಾನ್, ಶಿರಾಲಿಯ ತಟ್ಟಿಹಕ್ಕಲ್, ಪಳ್ಳಿಹಕ್ಕಲ್ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಕುಡಿಯುವ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ. ಕೂಡಲೆ ಪರಿಹಾರವನ್ನು ತಾಲೂಕಾಡಳಿತ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶೌಖತ್‍ಕತೀಬ್, ಖಮರುದ್ದೀನ್ ಮಷಾಯಿಕ್, ಅಬ್ದುಲ್ ಜಬ್ಬಾರ್ ಅಸದಿ, ಸಫ್ವಾನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Leave a Comment