ಕಾರವಾರ: ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಕಾರವಾರವರು ತಾಲೂಕಿನ ಗ್ರಾಮೀಣ ಯುವಕರನ್ನು ಕೃಷಿ ಕಡೆಗೆ ಆಕರ್ಶಿಸಲು ಮತ್ತು ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಕೃಷಿಯಲ್ಲಿ ಇಂಜಿನಿಯರಿಂಗ್ ಡಿಪ್ಲೋಮಾ/ಕೃಷಿ ಡಿಪ್ಲೋಮಾ/ಆಟೋ ಮೊಬೈಲ್, ಮೆಕ್ಯಾನಿಕಲ್ ಡಿಪ್ಲೋಮಾ/ಐ.ಟಿ.ಐ/ಪಿ.ಯು.ಸಿ. ತೇರ್ಗಡೆ ಹೊಂದಿರುವ ಮತ್ತು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆ ತರಬೇತಿ ಪಡೆದಿರುವ ಹಾಗೂ ಕನಿಷ್ಠ 20 ಅಡಿ 15 ಅಡಿ ಅಳತೆಯ ಕೊಠಡಿ ಅಥವಾ ಗೋದಾಮು ಹೊಂದಿರುವ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಿದ್ದಾರೆ.
ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನವಾಗಿರುತ್ತದೆ. ಕಾರವಾರ (ಬಾಡ) ಹೋಬಳಿಯ ನಗರಸಭೆ ವ್ಯಾಪ್ತಿ ಹೊರತುಪಡಿಸಿದ ಪ್ರದೇಶದಲ್ಲಿ ಕೃಷಿಗೆ ಪೂರಕವಾದ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಪಂಪ್ ಸೆಟ್, ಸ್ಪ್ರೇಯರ್ ಹಾಗೂ ಬೋರ್‍ವೆಲ್‍ಗಳ ದುರಸ್ಥಿಗಾಗಿ ಅವಶ್ಯವಿರುವ ಟೂಲ್‍ಕಿಟ್, ಗ್ರೈಂಡಿಂಗ್ ಮಸೀನ್, ಹ್ಯಾಂಡ್ ಡ್ರಿಲ್ಲಿಂಗ್, ವೆಲ್ಡಿಂಗ್, ಸ್ಪೋಟ್ ವೆಲ್ಡಿಂಗ್, ಏರ್ ಕಾಂಪ್ರೆಸರ್ ಹಾಗೂ ಇತರೇ ಅವಶ್ಯವಿರುವ ಉಪಕರಣಗಳನ್ನು ಸೇವಾ ಕೇಂದ್ರದಲ್ಲಿ ನಿರ್ವಹಿಸಬೇಕಾಗಿರುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50ರಷ್ಟು ಗರಿಷ್ಟ 5 ಲಕ್ಷಗಳ ವರೆಗೆ ಮತ್ತು ಪ.ಜಾ/ಪ.ಪಂಗಡ ರೈತರಿಗೆ ಶೇಕಡಾ 75ರಷ್ಟು ಗರಿಷ್ಟ 7.5 ಲಕ್ಷಗಳ ವರೆಗೆ ಪ್ರೋತ್ಸಾಹ ಧನವನ್ನು ಪಡೆಯಲು ರಾಷ್ರ್ರೀಕೃತ/ಪ್ರಾದೇಶಿಕ ಗ್ರಾಮೀಣ/ಸಹಕಾರಿ/ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗಳಲ್ಲಿ ಪಡೆದ ಸಾಲದ ಆಧಾರದ ಮೇಲೆ 1 ಬಾರಿ ನೀಡಲಾಗುವುದು. ( ಬ್ಯಾಕ್ ಎಂಡೆಡ್ ಸಬ್ಸಿಡಿ)
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಾರವಾರ ಇವರನ್ನು ಸಂಪರ್ಕಿಸಬಹುದೆಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment