ಕಾರವಾರ: ಅರಬ್ಬಿ ಸಮುದ್ರದಲ್ಲಿ ಹವಾಮಾನ ತಪಾಸಣೆಯ ಬೃಹತ್ ಸಾಧನೆವೊಂದು ಕೊಚ್ಚಿ ಬಂದಿದೆ.
ಸೋಮವಾರ ಸಂಜೆ ಇಲ್ಲಿನ ಕೂರ್ಮಗಡ ದ್ವೀಪದ ಬಳಿ “ಬಾಯ್” ಎಂದು ಹೆಸರಿಸಲಾದ ಸಾಧನ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆಯವರಿಗೆ ವಿಷಯ ಮುಟ್ಟಿಸಿರು. ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆಯವರು ಬೋಟ್ ಮೂಲಕ ಕೂರ್ಮಗಡ ಬಳಿ ತೆರಳಿ ಬಾಯ್ ನ್ನು ಪರಿಶೀಲಿಸಿದರು. ಸಂಪೂರ್ಣ ಕಬ್ಬಿಣದಿಂದ ಆವೃತ್ತವಾದ ಈ ಸಾಧನದ ಒಳಭಾಗದಲ್ಲಿ ಹಲವು ಪರಿಕರಗಳಿದ್ದವು. ನಂತರ ಇದನ್ನು ಎಳೆದು ತಂದು ದೇವಭಾಗ ಕಡಲತೀರದಲ್ಲಿ ಇರಿಸಲಾಯಿತು. ಕೋಸ್ಟಗಾರ್ಡ, ಹವಾಮಾನ ಇಲಾಖೆ, ಭಾರತೀಯ ನೌಕಾದಳ ಮೊದಲಾದ ಇಲಾಖೆಯವರು ಹವಾಮಾನ ಮಾಹಿತಿಗಾಗಿ ಈ ಸಾಧನವನ್ನು ಬಳಸುತ್ತಾರೆ. ಸಮುದ್ರದ ಏರಿಳಿತ, ವಾಯುಗುಣ ಬದಲಾವಣೆಯ ಕುರಿತು ಇದು ಮಾಹಿತಿ ಒದಗಿಸುತ್ತದೆ. ಸದ್ಯ ಸಮುದ್ರದಲ್ಲಿ ಕೊಚ್ಚಿ ಬಂದಿರುವ ಬಾಯ್ ಯಾವ ಇಲಾಖೆಗೆ ಸೇರಿದ್ದು ಎಂದು ತಿಳಿದು ಬಂದಿಲ್ಲ. ದುಬಾರಿಯಾದ ಸಾಮಗ್ರಿ ಇದಾಗಿರುವದರಿಂದ ಪೊಲೀಸ್ ಕಾವಲು ಇರರಿಸಲಾಗಿದೆ.
Leave a Comment