ಕಾರವಾರ:
ಪ್ರತಿ ಶನಿವಾರ ನಗರದಲ್ಲಿ ಸ್ವಚ್ಚತಾ ಆಂದೋಲನ ನಡೆಸುತ್ತಿರುವ ಪಹರೆ ವೇದಿಕೆಗೆ ಚಿತ್ರದುರ್ಗದ ಮುರುಘಾ ಮಠ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿದೆ.
ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಪ್ರಶಸ್ತಿ ಸ್ವೀಕರಿಸಿದರು. ಮೂರು ವರ್ಷಗಳಿಂದ ಸ್ವಚ್ಚತೆಗಾಗಿ ಶ್ರಮಿಸುತ್ತಿರುವ ವೇದಿಕೆ ಕಾರ್ಯ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ವಿವಿಧ ಧಾರ್ಮಿಕ ಮುಖಂಡರು ವೇದಿಕೆಯಲ್ಲಿದ್ದರು.
Leave a Comment