ಕಾರವಾರ: ಕಳೆದ ನಾಲ್ಕು ವರ್ಷಗಳಿಂದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅಭಿಮಾನಿಗಳ ಕೈಗೆ ಸಿಕ್ಕಿಲ್ಲ. ಹೀಗಾಗಿ ನ.12 ರಂದು ಅವರ ಮನೆಮುಂದೆ ದರಣಿ ನಡೆಸುವದಾಗಿ ಆನಂದ ಅಸ್ನೋಟಿಕರ್ ಅಭಿಮಾನಿಗಳು ಎಚ್ಚರಿಸಿದ್ದಾರೆ.
ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ರಾಘು ನಾಯ್ಕ, ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಿಂದ ಯಾವದೇ ಅಭಿವೃದ್ಧಿ ನಡೆದಿಲ್ಲ. ಈ ಬಗ್ಗೆ ಪ್ರಶ್ನಿಸಬೇಕಿದ್ದ ಆನಂದ ಅಸ್ನೋಟಿಕರ್ ಕೂಡ ಜನರ ಜೊತೆ ಬೆರೆಯುತ್ತಿಲ್ಲ. ಹೀಗಾಗಿ ಇಲ್ಲಿನ ಹಲವು ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲ ಎಂಬಂತಾಗಿದೆ. ಕೂಡಲೇ ಆನಂದ ಅಸ್ನೋಟಿಕರ್ ತಮ್ಮ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು. 1995ರಲ್ಲಿ ದಿ. ವಸಂತ ಅಸ್ನೋಟಿಕರ್ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಜನರ ಪ್ರೀತಿ ಗಳಿಸಿದ್ದರು. ಅವರು ಗುಂಡೇಟಿಗೆ ಬಲಿಯಾದ ಬಳಿಕ ಚಿಕ್ಕ ವಯಸ್ಸಿನಲ್ಲಿಯೇ ಮಂತ್ರಿಯಾಗಿದ್ದ ಆನಂದ ಅಸ್ನೋಟಿಕರ್ ಚುನಾವಣೆಯಲ್ಲಿ ಸೋತ ಬಳಿಕ ಜನರಿಂದ ದೂರವಾಗಿದ್ದಾರೆ. ಹೀಗಾಗಿ ಅವರ ಮನೆ ಮುಂದೆ ದರಣಿ ನಡೆಸಲು ನಿರ್ಧರಿಸಿರುವದಾಗಿ ತಿಳಿಸಿದರು. ಅಂಕೋಲಾದ ಸುನಿಲ್ ನಾಯ್ಕ, ದಿಲೀಪ ಅರ್ಗೇಕರ್ ಇತರರಿದ್ದರು.
Leave a Comment