ಕಾರವಾರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯ 77-ಕಾರವಾರ, ವಿಧಾನ ಸಭಾ ಕ್ಷೇತ್ರದ ಕಾರವಾರ ತಾಲ್ಲೂಕಿನಲ್ಲಿ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಹಕ್ಕು ಆಕ್ಷೇಪಣೆಗಳಿಗೆ ಅರ್ಜಿ ನಮೂನಾ ನಂ.6, 6ಎ, 7, 8, 8ಎ ಸಲ್ಲಿಸಲು ನವ್ಹಂಬರ 15 ರಿಂದ 30 ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದಾರೆ.
ಇಲ್ಲಿಯವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸದೇ ಇರುವವರು ತಮ್ಮ ಹೆಸರನ್ನು ಪಟ್ಟಿಯಲ್ಲಿ ದಾಖಲಿಸಲು ಮರಣ ಪಟ್ಟಿಲ್ಲಿ/ವರ್ಗಾವಣೆಗೊಂಡಲ್ಲಿ/ ಹೆಸರು ಕಡಿಮೆ ಮಾಡಲು ಹಾಗು ತಿದ್ದುಪಡಿ ಮಾಡುವ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರವಾರ ತಾಲೂಕು ತಹಶೀಲ್ದಾರ ಜಿ.ಎನ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment