ಕಾರವಾರ:
ಕನ್ನಡ ರಾಜ್ಯೋತ್ಸವದಂದು ವಿಕಲ ಚೇತನರಿಗೆ ತ್ರಿಚಕ್ರ ವಾಹನ ನೀಡುವದಾಗಿ ಫೋಟೋ ತೆಗೆಸಿಕೊಂಡ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ ಮಾಡಿದೆ.
ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಸರಕಾರದಿಂದ ಮಜೂರಾಗಿದ್ದ ವಾಹನಗಳನ್ನು ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನೀಡಿದ್ದರು. ಅಂದು ವಾಹನ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ಈವರೆಗೂ ವಾಹನ ಮಂಜೂರಿ ಪಡೆದಿರುವ ಮುಂಡಗೇರಿಯ ನಯಾಜ್ ಸೈಯದ್ ಎಂಬಾತರಿಗೆ ವಾಹನ ದೊರತಿಲ್ಲ. ಅಂದು ವಾಹನ ನೀಡಿದಂತೆ ಫೋಟೋ ತೆಗೆಸಿಕೊಂಡು ಇವರಿಗೆ ವಂಚಿಸಲಾಗಿದೆ. ಫಲಾನುಭವಿಗಳಿಗೆ ವಾಹನವನ್ನು ನೀಡುವ ಬಗ್ಗೆ ಕೇಳಿದರಿ ಸರಿಯಾಗಿ ಮಾಹಿತಿಯನ್ನು ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕರೆ ಮಾಡಿ ವಾಹನದ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಕಚೇರಿಗೆ ಎಷ್ಟು ಬಾರಿ ಪೋನ್ ಮಾಡುತ್ತೀರಿ, ನೀವು ಎಷ್ಟು ತಲೆ ತಿನ್ನುತ್ತೀರಾ? ಎಂದು ಪ್ರರ್ಶನಿಸುತ್ತಿದ್ದಾರೆ ಎಂದು ಸಂಶಾ ಸೈಯದ್ ಅಳಲು ತೋಡಿಕೊಂಡರು.
ನ.1ರಂದು ವಾಹನ ಮಂಜೂರಿ ಮಾಡಿದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಇನ್ನೂ ಎರಡೇ ದಿನದಲ್ಲಿ ವಾಹನ ನಿಮಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇನ್ನೂ ಭರವಸೆ, ಭರವಸೆಯಾಗಿಯೇ ಉಳಿದುಕೊಂಡಿದೆ. ವಾಹನ ಯಾವಾಗ ನೀಡುತ್ತೀರಿ ಎಂದು ವಿಚಾರಣೆ ಮಾಡಲು ಕಚೇರಿಗೆ ಕರೆ ಮಾಡಿ ಕೇಳಿದರೆ ಸಮಾಧಾನವಾಗಿ ಮಾತನಾಡದೆ ಕರೆಯನ್ನು ಕಟ್ ಮಾಡುತ್ತಾರೆ ಎಂದು ಸಂಶಾ ಸೈಯದ್ ಅವರು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರಿಗೆ ದೂರು ನೀಡಿದರು.
Leave a Comment