ಕಾರವಾರ:
ಕರ್ನಾಟಕ ಲಲಿತ ಕಲಾ ಅಕಾಡೆಮಿಯು 2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ಕಲಾವಿದರಿಗೆ ರಾಜ್ಯದ ಒಳ ಮತ್ತು ಹೊರ ರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಕ್ಕೆ ಅವಕಾಶವಿದ್ದು ಭಾಗವಹಿಸುವ ಕಲಾವಿದರು ತಾವು ರಚಿಸಿದ ಇತ್ತಿಚೀನ ಕಲಾಕೃತಿಗಳ 5*7 ಅಂಗುಲ ಅಳತೆಯ ಛಾಯಚಿತ್ರಗಳನ್ನು ಕಳುಹಿಸಬೇಕು. ಅವು ಕಳೆದ 2 ವರ್ಷಗಳಿಂದಿಚೆಗೆ ರಚಿಸಿದ ಕಲಾಕೃತಿಗಳಾಗಿರಬೇಕು ಮತ್ತು ಯಾವುದೇ ಕಲಾಪ್ರದರ್ಶನದಲ್ಲಿ ಮುಂಚೆ ಪ್ರದರ್ಶನಗೊಂಡಿರಬಾರದು. ಅರ್ಜಿ ಸಲ್ಲಿಸಬಯಸುವರು ಡಿಸೆಂಬರ 16ರೊಳಗೆ ಕನಿಷ್ಠ 5 ಕಲಾಕೃತಿಗಳ ಛಾಯಾಚಿತ್ರಗಳು ಹಾಗೂ ತಮ್ಮ ಭಾವಚಿತ್ರ ಪರಿಚಯ ಪತ್ರ, ಸೂಕ್ತ ದಾಖಲೆಗಳೊಂದಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಚೇರಿ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರ-02 ಇಲ್ಲಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22480297 ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ ಇಂದ್ರಮ್ಮ .ಹೆಚ್.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment