ಹಳಿಯಾಳ: ಬಿಜೆಪಿ ಪಕ್ಷದ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ, ರಾಜ್ಯ ಮುಖಂಡರೊಂದಿಗೆ ತಮ್ಮ ಪೊಟೊ ಹಾಕಿರುವ ಬ್ಯಾನರ್‍ಗಳನ್ನು ಹರಿದು ಹಾಕಿದ್ದರ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲಿಸರ ಪ್ರಥಮ ತನಿಖೆಯಲ್ಲಿ ಕಿಡಿಗೇಡಿಗಳ ಗುರುತು ಪತ್ತೆಯಾಗಿದ್ದು ಈ ಬಗ್ಗೆ ಪಕ್ಷದ ಹೈಕಮಾಂಡಗೆ ದಾಖಲೆ ಸಮೇತ ದೂರು ನೀಡಲಾಗಿದೆ ಎಂದು ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಹೇಳಿದರು. ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಜೂನ್ 7 ರಂದೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಮಾಜಿ ರಾಜ್ಯ ಸಚಿವ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿದ್ದು ತಮ್ಮ ಸದಸ್ಯತ್ವ ಸಂಖ್ಯೆ 2001923650 ಇದೆ ಎಂದು ದಾಖಲೆ ಸಮೇತ ಮಾಧ್ಯಮಕ್ಕೆ ಹೇಳಿದ ಪಾಟೀಲ್ ಇತ್ತೀಚೆಗೆ ಪಕ್ಷದ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ತಮ್ಮ ಪತ್ರಿಕಾಗೊಷ್ಠಿ ಒಂದರಲ್ಲಿ ತಾವು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ ಎಂದು ಹೇಳಿದ್ದಕ್ಕೆ ತಾವು ದಾಖಲೆ ತೊರಿಸಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಸ್ಪಷ್ಟಪಡಿಸಿದರು. ಬಿಜೆಪಿಯ ಪರಿವರ್ತನಾ ಸಮಾವೇಶ ಹಳಿಯಾಳದಲ್ಲಿ ನಡೆಯುವ ಸಂದರ್ಭದಲ್ಲಿ ತಾವು ತಮ್ಮ ಭಾವಚಿತ್ರವಿದ್ದ ಬ್ಯಾನರ್ ಹಾಗೂ ಕಟೌಟಗಳು ನಿಲ್ಲಿಸಿದ್ದನ್ನು ನಮ್ಮದೇ ಪಕ್ಷದ ಕೆಲವು ಕಿಡಿಗೇಡಿ ಜನರು ಹರಿದು ಹಾಕಿದ್ದು ಈ ಬಗ್ಗೆ ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೇರಾಗ ಫುಟೆಜ್‍ನಿಂದ ಕಿಡಿಗೇಡಿಗಳ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಪೋಲಿಸರು ತನಿಖೆ ಚುರುಕುಗೊಳಿಸಿದ್ದು ಕ್ರಮ ಕೈಗೊಳ್ಳಲಿದ್ದಾರೆಂದ ಪಾಟೀಲ್ ನಮ್ಮದೇ ಪಕ್ಷದ ಕೆಲವು ಮುಖಂಡರು ತಮ್ಮ ವಿರುದ್ದ ಮಾಡುತ್ತಿರುವ ಕುತಂತ್ರದ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಿಗೆ ದಾಖಲೆ ಸಮೇತ ದೂರು ನೀಡಲಾಗಿದೆ ಎಂದರು. ಸಚಿವ ಆರ್.ವಿ.ದೇಶಪಾಂಡೆ ವಿರುದ್ದ ಕಿರಿಕಾರಿದ ಪಾಟೀಲ್ ಅವರು ಸಚಿವ ದೇಶಪಾಂಡೆ ಚುನಾವಣಾ ಕಣದಿಂದ ಹಿಂದೆ ಸರಿದು ಒಬ್ಬ ಸಮರ್ಥ ಮರಾಠಾ ವ್ಯಕ್ತಿಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಪತ್ರಿಕಾಗೊಷ್ಠಿಯಲ್ಲಿ ಮುಖಂಡರಾದ ಕಬ್ಬು ಬೆಳೆಗಾರ ಪ್ರಕೋಸ್ಟ ಜಿಲ್ಲಾ ಸಂಚಾಲಕ ಪ್ರಕಶಾ ಕಮ್ಮಾರ, ಮಾಜಿ ಜಿಲ್ಲಾ ಉಪಾಧ್ಯಕ್ಷ ಎಸ್.ಕೆ.ಗೌಡಾ, ಮುಖಂಡರಾದ ಉದಯ ನಾರ್ವೇಕರ, ರಾಘವೇಂಧ್ರ ನಾಯ್ಕ, ಮಹಾದೇವ ಶಿದಬಾನ್ನವರ, ವಿನಾಯಕ ರಗಟೆ, ಬಾಳಕೃಷ್ಣ ಢೇಫಿ, ಶಾಂತಾರಾಮ ಸೂರ್ಯವಂಶಿ ಇತರರು ಇದ್ದರು.
Leave a Comment