ಹಳಿಯಾಳ :- ಪಟ್ಟಣದ ಪುರಸಭೆಯ ಅಧ್ಯಕ್ಷ ಉಮೇಶ ಬೋಳಶೇಟ್ಟಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷದಲ್ಲಿ ಆಗಿರುವ ಒಡಂಬಡಿಕೆಯಂತೆ ತಮ್ಮ ಅವಧಿ ಮುಗಿದ ಬಳಿಕ ಜಿಲ್ಲಾಧಿಕಾರಿಗಳ ಬಳಿ ತೆರಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು ದಿ.28ರ ವರೆಗೆ ಅವರು ತಮ್ಮ ರಾಜೀನಾಮೆ ಪತ್ರ ಹಿಂಪಡೆಯಲು ಅವಕಾಶವಿದ್ದು ಅವಧಿಯ ಬಳಿಕ ಜಿಲ್ಲಾಧಿಕಾರಿಗಳು ರಾಜೀನಾಮೆಯನ್ನ ಅಂಗೀಕರಿಸಲಿದ್ದು ಬಳಿಕ 7 ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿ.28ರ ಬಳಿಕ ಪುರಸಭೆ ಉಪಾಧ್ಯಕ್ಷರಾಗಿರುವ ಅರುಣ ಬೋಬಾಟಿ ಅವರು ಅಧ್ಯಕ್ಷರ ಆಯ್ಕೆಯ ವರೆಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಶಂಕರ ಬೆಳಗಾಂವಕರ ಅಧ್ಯಕ್ಷ :- ಈ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವಲ್ಪದರಲ್ಲೇ ಅಧ್ಯಕ್ಷ ಸ್ಥಾನ ತಪ್ಪಿಸಿಕೊಂಡಿದ್ದ ಶಂಕರ ಅವರು ಹಿರಿಯ ಪುರಸಭೆ ಸದಸ್ಯರಾಗಿದ್ದು ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅನುಭವವಿದ್ದು ಅವರಿಗೆ ಅಧ್ಯಕ್ಷ ಸ್ಥಾನ ದೊರೆಯುವ ಎಲ್ಲ ಸಾಧ್ಯತೆಗಳಿವೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೇಸ್ ಮುಖಂಡ ಪಕ್ಷದಲ್ಲಿನ ಒಡಂಬಡಿಕೆಯಂತೆ ಪುರಸಭೆ ಕೊನೆಯ ಅವಧಿಗೆ ಮರಾಠಾ ಸಮುದಾಯದ ಶಂಕರ ಬೆಳಗಾಂವಕರ ಅವರೇ ಅಧ್ಯಕ್ಷರಾಗಲಿದ್ದಾರೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.
Leave a Comment