ಹಳಿಯಾಳ: ದಿ. 10 ರಂದು ತಾಲೂಕಿನ ಮಾಗವಾಡ ಅರಣ್ಯ ಸರ್ವೆ ನಂಬರ 78 ರಲ್ಲಿ ಅರಣ್ಯಕ್ಕೆ ಬೆಂಕಿ ಹಾಕಿ ಲಕ್ಷಾಂತರ ರೂ. ಹಾನಿಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹಳಿಯಾಳ ವಲಯದ ತೇರಗಾಂವ ಗ್ರಾಮದ ನಿವಾಸಿಯಾದ ಅಬ್ದುಲ ಖಾದರ ಖಾನಸಾಬ ಡೊನಸಾಲಿ ಬಂಧಿತ ಆರೋಪಿಯಾಗಿದ್ದು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಹಳಿಯಾಳ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಭೇದಾರ ತಿಳಿಸಿದ್ದಾರೆ. ಡಿಎಫ್‍ಓ ಡಾ: ರಮೇಶ ಎಸ್, ಎಸಿಎಫ್ ಸಂತೋಷಕುಮಾರ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ಹಳಿಯಾಳ ವಲಯ ಅರಣ್ಯಾಧಿಕಾರಿ ಪ್ರಸನ್ ಸುಬೇದಾರ, ದಿಲೀಪ್ ನಾಯ್ಕ, ವಾಯ್ ಎ ಬಾನಸೇ, ಸಿಬ್ಬಂದಿಗಳಾದ ರಾಜು ಕಾಕಂಡಕಿ, ಪುಂಡಲೀಕ ಲಾಡ್ ಕಾರ್ಯಾಚಾರಣೆ ನಡೆಸಿ ಆರೋಪಿಯನ್ನು ಮನೆಯಲ್ಲಿ ಅವಿತು ಕುಳಿತುಕೊಂಡ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂದಿಸಿದ್ದಾರೆ.
Leave a Comment