ಹಳಿಯಾಳ : ಇಬ್ಬರು ವಿವಾಹಿತ ಮಹಿಳೆಯರು ಸೇರಿದಂತೆ ಪುರುಷನೊರ್ವ ಕಾಣೆಯಾಗಿರುವ ಪ್ರತ್ಯೇಕ ಮೂರು ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ತಾಲೂಕಿನ ಹುನ್ಸವಾಡ ಗ್ರಾಮದ ಭಾರತಿ ಮಂಜುನಾಥ ಹುಚ್ಚಂಬ್ಲಿ(32) ದಿ.3-1-2018 ರಂದು ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ಮಂಜುನಾಥ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮುತ್ತಲಮುರಿ ಗ್ರಾಮದ ಸುಜಾತಾ ಸಂಜಯ ಬಕವಾಡಕರ(26) ದಿ.18-11-2017 ರಿಂದ ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ಸಂಜಯ ಠಾಣೆಗೆ ದೂರು ನೀಡಿದ್ದಾನೆ. ಮೂರನೆ ಪ್ರಕರಣದಲ್ಲಿ ತಾಲೂಕಿನ ಕೆಸರೊಳ್ಳಿ ಗ್ರಾಮದ ಗಜಾನನ ಭರಮಣ್ಣಾ ಜಡೆ(35) ದಿ.5-8-17 ರಿಂದ ನಾಪತ್ತೆಯಾಗಿರುವ ಬಗ್ಗೆ ಆತನ ಪತ್ನಿ ಯಶೋದಾ ದೂರು ನೀಡಿದ್ದಾಳೆ. ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಹಳಿಯಾಳ ಪಿಎಸ್‍ಐ ಆನಂದಮೂರ್ತಿ ತನಿಖೆ ನಡೆಸುತ್ತಿದ್ದಾರೆ. ಕಾಣೆಯಾಗಿರುವವರ ಮಾಹಿತಿ ಜನತೆಗೆ ದೊರಕಿದ್ದಲ್ಲಿ ತಕ್ಷಣ ದೂ ಸಂಖ್ಯೆ 9480805265 ಹಾಗೂ 08284-220133 ಸಂಪರ್ಕಿಸುವಂತೆ ಕೊರಿದ್ದಾರೆ.


Leave a Comment