ಹಳಿಯಾಳ: ಬೀದಿ ನಾಯಿಗಳ ಹಾವಳಿ ತಪ್ಪಿಸಲು ಹಳಿಯಾಳ ಪುರಸಭೆ ಎನ್ನಿಲ್ಲದ ಕಸರತ್ತು ಮಾಡುತ್ತಿದ್ದು ತಮಿಳ್ನಾಡುವಿನಿಂದ ಬಂದಿರುವ 5ಜನರ ತಂಡ ಈಗಾಗಲೇ ಪುರಸಭೆ ಅಧಿಕಾರಿಗಳ ಕಣ್ಗಾವಲಿನಲ್ಲಿ ನಾಯಿಗಳನ್ನು ಸೆರೆಹಿಡಿಯುವ ಕಾರ್ಯದಲ್ಲಿ ತೊಡಗಿದೆ. ಕಳೆದ ಒಂದು ವಾರದ ಹಿಂದೆ ಪ್ರಕಟಣೆ ಮೂಲಕ ಸಾಕು ನಾಯಿಗಳಿಗೆ ಬೆಲ್ಟ್ ಹಾಕುವಂತೆ ಹಾಗೂ ಮನೆಯಂಗಳಗಳಲ್ಲಿ ಕಟ್ಟಿ ಹಾಕಿಕೊಳ್ಳುವಂತೆ ಪ್ರಕಟಣೆ, ಅನೌನ್ಸಮೆಂಟ್ ಮಾಡಿಸಿದ್ದ ಪುರಸಭೆ ಕಳೆದ 3-4 ದಿನಗಳಿಂದ ಹಠಾತ್‍ನೆ ನಾಯಿ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಈವರಗೆ ಸುಮಾರು 20ಕ್ಕೂ ಹೆಚ್ಚು ಬಿದಿ ನಾಯಿಗಳನ್ನು ಹಿಡಿದು ಸುಮಾರು 20ರಿಂದ 25 ಕೀಮಿ ಅಂತರದಲ್ಲಿ ಹೊಗಿ ಬಿಟ್ಟು ಬರಲಾಗುತ್ತಿದೆ ಅಲ್ಲದೇ ಇನ್ನೂ ಕಾರ್ಯಾಚರಣೆ ಮುಂದುವರೆದಿದೆ. ಪ್ರತಿ ನಾಯಿಗೆ 250 ರೂನಂತೆ ನಾಯಿ ಹಿಡಿಯುವವರಿಗೆ ಹಣ ನೀಡಲಾಗುತ್ತಿದೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಸಾಕು ನಾಯಿಗಳಿಗೆ ಬೆಲ್ಟ್ ಹಾಕಿ, ಮನೆ ಆವರಣದಲ್ಲಿ ಕಟ್ಟಿ ಹಾಕಿ ಹಾಗೂ ನಿಯಮಿತವಾಗಿ ರೆಬಿಸ್ ಚುಚ್ಚುಮದ್ದು ಹಾಕಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಲಿಕರು ನಿಗಾವಹಿಸಬೇಕು. ಉಪಟಳ ನೀಡುತ್ತಿರುವ ಬಿಡಾಡಿ ನಾಯಿಗಳ ಕುರಿತು ಪುರಸಭೆಗೆ ಮಾಹಿತಿ ನೀಡುವಂತೆ ಕೊರಿದ್ದು ನಾಯಿ ಹಿಡಿಯುವ ಸಂದರ್ಭದಲ್ಲಿ ಸಾಕು ನಾಯಿಗಳಿದ್ದರೇ ಮಾಹಿತಿ ನೀಡಿ ಅದೇ ಕ್ಷಣದಲ್ಲಿ ಬಿಡಿಸಿಕೊಂಡು ಹೊಗಬೇಕು ಹಾಗೂ ಬಳಿಕ ಬೆಲ್ಟ್ ಹಾಕಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೇ ಮಾಲಿಕರ ಮೇಲೆ ಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದಾರೆ. ಸಾರ್ವಜನೀಕರ ದೂರು :- ಬೆಲ್ಟ್ ಹಾಕಿರುವ ಕೆಲವು ನಾಯಿಗಳನ್ನು ಪುರಸಭೆಯವರು ಹಿಡಿಯುತ್ತಿದ್ದಾರೆಂದು ಸಾರ್ವಜನೀಕರು ಆರೋಪಿಸುತ್ತಿದ್ದು ಉಪಟಳ ನೀಡುವ ನಾಯಿಗಳನ್ನು ಗುರುತಿಸಿ ಅವುಗಳನ್ನು ಹಿಡಿದು ದೂರ ಸಾಗಿಸಿ ಹೊರತು ಮನೆಯ ಅಕ್ಕಪಕ್ಕ ಬಿದಿಗಳಲ್ಲಿ ಸುತ್ತಾಡುವ ಎಲ್ಲ ನಾಯಿಗಳನ್ನು ಹಿಡಿಯುವುದು ಸರಿಯಲ್ಲ ಪುರಸಭೆ ಯೋಚಿಸಿ ಕ್ರಮ ಕೈಗೊಳ್ಳಲಿ ಪ್ರಾಣಿ ಹಿಂಸೆ ಮಾಡದಿರಲಿ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
Leave a Comment