ಹಳಿಯಾಳ: ಆಲ್‍ಇಂಡಿಯಾ ಎಮ್‍ಪಾವರಮೇಂಟ್ ಪಾರ್ಟಿ(ಎಮ್‍ಇಪಿ) ಪಕ್ಷದಿಂದ ತಾಲೂಕಿನ ಬುಡಕಟ್ಟು ಸಿದ್ದಿ ಸಮುದಾಯದ ಮುಖಂಡ ಬಡೇಸಾಬ ಕಕ್ಕೇರಿ ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ ಹಳಿಯಾಳ-ಜೋಯಿಡಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಶೋಭಾ ಕೊಳದಾರ, ಸುಧಾ ಗೌಡಾ, ಶಾಲಂಬಿ ಹಳಬ, ಮಹಮ್ಮದಸಾಬ ಅರಳಿಕಟ್ಟಿ ಇದ್ದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದ ಬಡೇಸಾಬ ಕಕ್ಕೇರಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ನಾನು ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ಹೊಲಸು ಮೆಟ್ಟಿಕೊಂಡಿರುವ ಸ್ಥಳೀಯ ರಾಜಕಾರಣಿಗಳ ಕುತಂತ್ರದಿಂದ ಸಾಕಷ್ಟು ನೋವು ಅನುಭವಿಸಿದ್ದು ಬಡಜನರಿಗೆ ನೆರವಾಗುವ ದೃಷ್ಠಿಯಿಂದ ಚುನಾವಣೆಗೆ ಸ್ಪರ್ದಿಸುತ್ತಿದ್ದು ಉತ್ತಮ ಸ್ಪರ್ದೆ ನೀಡುತ್ತೇನೆಂದರು. ಈ ಸಂದರ್ಭದಲ್ಲಿ ಮುಖಂಡರಾದ ದಾಂಡೇಲಿಯ ರಾಘು ಜಿ ನಾಯ್ಕ, ಯುಸುಫ, ಬಸುಬಿ ಕಕ್ಕೇರಿ, ರಸುಲಸಾಬ ಜಮಾದಾರ, ಮೌಲಾಲಿ ಕಕ್ಕೇರಿ, ಇತರರು ಇದ್ದರು.
Leave a Comment