ಹಳಿಯಾಳ :- ಇತ್ತೀಚಿನ ದಿನಗಳಲ್ಲಿ ಜನರಿಗೆ ರಾಜಕಾರಣಿಗಳ ಬಗ್ಗೆ ಸಂದೇಹ ಮೂಡುತ್ತಿದ್ದು ಕೇವಲ ಅಧಿಕಾರ ಹಾಗೂ ಹಣಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆಂದು ಆಡಿಕೊಳ್ಳುತ್ತಿದ್ದು ರಾಜಕಾರಣಿಗಳು ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ನಿವಾರಿಸಿ ಪರಿಹರಿಸುವ ಕೆಲಸ ಮಾಡಬೇಕು ಅಲ್ಲದೇ ಜನರ ಕೆಲಸ ನಮ್ಮ ರಾಜಕೀಯ ಧರ್ಮವಾಗಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಹೊರವಲಯದಲ್ಲಿರುವ ಅಂಗಡಿ ಉದ್ಯಾನವನದ ಸಭಾ ಭವನದಲ್ಲಿ ನಡೆದ ಕಾಂಗ್ರೇಸ್ ಕಮೀಟಿ ಆಯೋಜಿಸಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಭಾಷಣ ಪತ್ರಿಕಾ ಹೇಳಿಕೆ, ಪೊಳ್ಳು ಭರವಸೆಯಿಂದ ಸಮಾಜದ ಅಭಿವೃದ್ದಿ ಸಾದ್ಯವಿಲ್ಲ ಸಮಾಜಕ್ಕಾಗಿ ಏನಾದರು ಮಾಡುವ ಹಂಬಲ ಜನಪ್ರತಿನಿಧಿಯಲ್ಲಿರಬೇಕೆಂದರು. ಬಿಜೆಪಿಯ ಸ್ವಾರ್ಥ ರಾಜಕೀಯ ಧೋರಣೆಯಿಂದ ದೇಶಾದ್ಯಂತ ಹಲವಾರು ರಾಜಕೀಯ ಪಕ್ಷದ ಮುಖಂಡರು ಅವರಿಂದ ದೂರವಾಗುತ್ತಿದ್ದಾರೆ. ರಾಜ್ಯದಲ್ಲಿಯೂ ಕೂಡ ಅವರಿಗೆ ಚುನಾವಣೆಯಲ್ಲಿ ಮತದಾರರು ಉತ್ತರ ನೀಡುವ ಮೂಲಕ 2018ರ ವಿಧಾನ ಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಲಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದ ಅವರು ಭರವಸೆಯ ಮಂತ್ರಿ ಅನಂತಕುಮಾರ ಅವರಿಗೆ ಹಾಗೂ ಸುಳ್ಳಿನ ಸರದಾರ ಮಾಜಿ ಶಾಸಕ ಸುನೀಲ್ ಹೆಗಡೆಗೆ ಸೋಲು ಖಚಿತವೆಂದು ಭವಿಷ್ಯ ನುಡಿದರು. ಸಭೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೇಸ್ ಪಕ್ಷ ಸೇರಿದ ಬಿಜೆಪಿ ಪಕ್ಷ ಮಾಜಿ ತಾಲೂಕಾಧ್ಯಕ್ಷ ಎಲ್.ಎಸ್.ಅರಿಶೀನಗೇರಿ ಮಾತನಾಡಿ ನಾನು ಹುಟ್ಟು ಕಾಂಗ್ರೇಸ್ಸಿಗನಾಗಿದ್ದರು ಕೂಡ ಅನಂತಕುಮಾರ ಹೆಗಡೆ ಮಾತಿಗೆ ಮರುಳಾಗಿ ಬಿಜೆಪಿ ಸೇರಿದ್ದೆ ಅಲ್ಲಿ ಅಭಿವೃದ್ದಿಯ ಮಾತಿಲ್ಲ ಹೀಗಾಗಿ ಮತ್ತೇ ಅಭಿವೃದ್ದಿಪರ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಎಂದಿಗೂ ಮತ್ತೇ ಬಿಜೆಪಿ ಪಕ್ಷ ಸೇರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಸಚಿವರ ಸಮ್ಮುಖದಲ್ಲಿ ಹಳಿಯಾಳ ಪಟ್ಟಣ ಮತ್ತು ಗ್ರಾಮೀಣ ಭಾಗಗಳಿಂದ ಹಾಗೂ ದಾಂಡೇಲಿಯಿಂದ ಯುವಕರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಬಿಡಿ ಚೌಗಲೆ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಮುಖಂಡರಾದ ಶಿವಪುತ್ರ ನುಚ್ಚಂಬ್ಲಿ, ಮಾಲಾ ಬ್ರಗಾಂಜಾ, ಅನಿಲ ಚವ್ವಾಣ, ಸತ್ಯಜೀತ ಗಿರಿ ಇದ್ದರು.
Leave a Comment