ಹಳಿಯಾಳ:-
2018ರ ವಿಧಾನ ಸಭಾ ಚುನಾವಣೆಗೆ ಹಳಿಯಾಳ-ಜೋಯಿಡಾ ವಿಧಾನ ಸಭಾ (76) ಕ್ಷೇತ್ರಕ್ಕೆ ಸಲ್ಲಿಸಿದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ನಡೆದು 11 ಅಭ್ಯರ್ಥಿಗಳಲ್ಲಿ 1 ಅಭ್ಯರ್ಥಿ ನಾಮಪತ್ರ ತಿರಸ್ಕøತವಾಗಿ ಅಂತಿಮವಾಗಿ 10 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬುಧಾವರ ಬೆಳಿಗ್ಗೆ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಎಲ್ಲ ಅಭ್ಯರ್ಥಿಗಳು ಹಾಗೂ ಏಜೆಂಟರ ಸಮಕ್ಷಮ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಹಳಿಯಾಳ ಕ್ಷೇತ್ರಕ್ಕೆ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರಿಂದ ಹೀಗೆ 11 ಅಭ್ಯರ್ಥಿಗಳಿಂದ 25 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಬುಧವಾರ ನಡೆದ ನಾಮಪತ್ರ ಪರಿಶೀಲನೆ(ಸ್ಕೂಟ್ನಿ) ವೇಳೆ ಬಿಜೆಪಿಯ ಪ್ರಮುಖ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ನಾಮಪತ್ರ ಸ್ವೀಕೃತವಾಗಿದ್ದರಿಂದ ಬಿಜೆಪಿಯಿಂದಲೇ ಪರ್ಯಾಯ ಅಭ್ಯರ್ಥಿಯಾಗಿ ಸುವರ್ಣಾ ಸುನೀಲ್ ಹೆಗಡೆ ಸಲ್ಲಿಸಿದ್ದ ನಾಮಪತ್ರವು ತೀರಸ್ಕøತವಾಗಿದೆ. ಈ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ, ಜೆಡಿಎಸ್‍ನಿಂದ ಕೆ.ಆರ್.ರಮೆಶ, ಸಿಪಿಐಎಮ್ ಪಕ್ಷದ ಅಭ್ಯರ್ಥಿ ಯಮುನಾ ಗಾಂವಕರ, ಇಂಡಿಯನ್ ನ್ಯೂ ಕಾಂಗ್ರೇಸ್ ಪಕ್ಷದಿಂದ ಜಹಾಂಗೀರಬಾಬಾ ಖಾನ್, ಎಮ್‍ಇಪಿ ಪಕ್ಷದ ಅಭ್ಯರ್ಥಿ ಬಡೇಸಾಬ ಕಕ್ಕೇರಿ, ಶಿವಸೇನೆಯಿಂದ ಶಂಕರ ಫಾಕ್ರಿ, ಪಕ್ಷೇತರ ಅಭ್ಯರ್ಥಿಗಳಾಗಿ ಟಿ.ಆರ್.ಚಂದ್ರಶೇಖರ, ಇಲಿಯಾಸ ಕಾಟಿ, ರಾಜಶೇಖರ ಬೆಳ್ಳಿಗಟ್ಟಿ ಅವರೆಲ್ಲರ ನಾಮಪತ್ರಗಳು ಸ್ವೀಕೃತವಾಗಿದ್ದು ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆಂದರು. 26 ಹಾಗೂ 27 ನಾಮಪತ್ರ ಹಿಂಪಡೆಯಲು 2 ದಿನ ಕಾಲಾವಕಾಶವಿದ್ದು 27 ಕ್ಕೆ ಸಾಯಂಕಾಲ 4.30ಗಂಟೆಗೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಭಜಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ 76 ವಿಧಾನ ಸಭಾ ಕ್ಷೇತ್ರ ವೀಕ್ಷಕ(ಒಬಸರ್ವರ) ಕೆಬಿ ಉಮಾಪ, ಸಹಾಯಕ ಚುನಾವಣಾಧಿಕಾರಿಗಳು ಇದ್ದರು.





Leave a Comment