ಹಳಿಯಾಳ:- 220 ಕೋಟಿ ರೂ. ವೆಚ್ಚದಲ್ಲಿ ಹಳಿಯಾಳದ ಕಾಳಿನದಿ ನೀರಾವರಿ ಯೋಜನೆ ಮಂಜೂರಾಗಿ ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದರೂ ಕೂಡ ಇದನ್ನು ಚುನಾವಣೆ ಗಿಮಿಕ್ ಎನ್ನುವ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ನಾಲಿಗೆ ಮೇಡ್ ಇನ್ ಚಿನಾ ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ವಾಗ್ದಾಳಿ ನಡೆಸಿದರು. ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ 2013ರಲ್ಲೇ ಮೊದಲ ಬಜೆಟ್‍ನಲ್ಲಿಯೇ ಸಚಿವ ಆರ್.ವಿ.ದೇಶಪಾಂಡೆಯವರು ಕಾಳಿನದಿ ನೀರಾವರಿ ಯೋಜನೆ ವಿಷಯ ಪ್ರಸ್ತಾಪಿಸಿ ಅದಕ್ಕೆ ಬಜೆಟ್‍ನಲ್ಲಿ ಮುಂಗಡ ಹಣ ಕಾಯ್ದಿರಿಸಿದ್ದರು ಎಂದು ಮಾಧ್ಯಮಗಳಿಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಯೋಜನೆ ಜಾರಿಗೆ ಅಸ್ತು ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಬಳಿಕ ನೀರಾವರಿ ನಿಗಮದವರು ವಿದ್ಯುತ್ ನಿಗಮದಿಂದ ಪರವಾನಿಗೆ ಪಡೆಯಲು ಅದರಂತೆ ಹಲವು ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಯೋಜನೆ ಜಾರಿಗೊಳಿಸಲು ಸಮಯ ತೆಗೆದುಕೊಂಡಿದೆ ಹೊರತು ಯೋಜನೆ ಜಾರಿಯೇ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಸುನೀಲ್ ಹೆಗಡೆ ನಡೆ ಖಂಡನೀಯವಾಗಿದ್ದು ಅವರು ಯೋಜನೆ ಜಾರಿಯಾಗಿಲ್ಲ ಇದೊಂದು ರಾಜಕೀಯ ನಾಟಕ ಎನ್ನುವ ಬಗ್ಗೆ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಲಿ ಎಂದು ಸವಾಲ್ ಹಾಕಿದರು. ಸಚಿವ ದೇಶಪಾಂಡೆ ಹಾಗೂ ಎಮ್.ಎಲ್.ಸಿ.ಎಸ್.ಎಲ್.ಘೋಟ್ನೇಕರ ಅವರ ಅವಿರತ ಪ್ರಯತ್ನದಿಂದ ತಾಲೂಕಿನ ರೈತರ ಪ್ರೋತ್ಸಾಹ-ಸಹಕಾರದಿಂದ ಇಂದು ಈ ಬೃಹತ್ ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ದೇಶಪಾಂಡೆ ಯಶಸ್ವಿಯಾಗಿದ್ದು ಇದರ ಶ್ರೇಯ ರೈತರಿಗೆ ಸಲ್ಲುತ್ತದೆ ಎಂದರು. ಈ ಹಿಂದೆ ಸುನೀಲ್ ಶಾಸಕರಿದ್ದ ಸಂದರ್ಭದಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಮಾಡುತ್ತೇನೆಂದು ಮಾಡಿದ ಪಾದಯಾತ್ರೆ ನಾಟಕದಿಂದ ಕೂಡಿತ್ತು ಹೊರತು ಅವರಿಗೆ ಇಂತಹ ಯೋಜನೆ ಜಾರಿಗೊಳಿಸುವ ಮನಸ್ಸಿಲ್ಲ ರೈತವಿರೋಧಿ ಇರುವ ಅವರು ಶಾಸಕರಿದ್ದ ಸಂದರ್ಭದಲ್ಲಿ ಯಾವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ದಾಖಲೆಗಳ ಸಮೇತ ಬಹಿರಂಗ ಪಡಿಸಲಿ ಎಂದರು. ಹಳಿಯಾಳ ಕ್ಷೇತ್ರ ಬಿಟ್ಟು ಕಾಳಿನದಿ ನೀರನ್ನು ಪಕ್ಕದ ಧಾರವಾಡ ಜಿಲ್ಲೆ ಅಳ್ನಾವರಕ್ಕೆ ಕೊಡಲು ಯೋಜನೆ ನಡೆದಿದೆ ಎನ್ನುವ ಸುನೀಲ್ ಹೆಗಡೆ ಅದನ್ನು ಸಾಬಿತು ಪಡಿಸಲಿ ಅಲ್ಲದೇ ನೀರು ಎಲ್ಲರಿಗೂ ಬೇಕು ಎಲ್ಲರಿಗೂ ಕುಡಿಯುವ ನೀರು ಸಿಗಬೇಕು ಎನ್ನುವುದು ಕಾಂಗ್ರೇಸ್ ಸರ್ಕಾರದ ಉದ್ದೇಶ ಆದರೇ ನೀರಿನ ವಿಷಯದಲ್ಲೂ ಕೆಟ್ಟ ರಾಜಕೀಯ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ತಾನು ಸೋಲುವುದು ಖಚಿತ ಎಂದು ತಿಳಿದಿದ್ದು ಹತಾಶರಾಗಿ ಎನಿಲ್ಲದ ಸುಳ್ಳು ಪ್ರಚಾರ ನಡೆಸುತ್ತಿರುವುದು ದುರ್ದೈವದ ಸಂಗತಿ ದೇಶಪಾಂಡೆ ಅವರು ಮತ್ತೇ ಶಾಸಕರಾಗಿ ಆಯ್ಕೆಯಾಗಿ ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಕಾಳಿನದಿ ನೀರು ರೈತರ ಹೊಲಗಳಿಗೆ ಹರಿಯಲಿದೆ ಎಂದು ಪ್ರಶಾಂತ ಭರವಸೆ ನೀಡಿದರು. ಕ್ಷೇತ್ರದಲ್ಲಿ ಹಲವು ಭಾಗಗಳಲ್ಲಿ ಶಿವಾಜಿ ಪುಥ್ಥಳಿ ಸ್ಥಾಪನೆಗೆ ಕಾಂಗ್ರೇಸ್ ಸರ್ಕಾರ ಹಾಗೂ ದೇಶಪಾಂಡೆ ಅವಕಾಶ ನೀಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷದವರು ಮಹಾನ್ ಪುರುಷರ ಸಾರ್ವಜನೀಕವಾಗಿ ಪುಥ್ಥಳಿ ಸ್ಥಾಪನೆ ಕುರಿತು ಸುಪ್ರಿಂಕೊರ್ಟ ನೀಡಿರುವ ಆದೇಶ ಹಾಗೂ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ದೊರೆತಿಲ್ಲ ಎನ್ನುವುದು ತಿಳಿದಿಲ್ಲದೇ ಎಂದು ಪ್ರಶ್ನೀಸಿದರು. ಇನ್ನೂ ಬಿಜೆಪಿಯವರು ಕರಪತ್ರವೊಂದನ್ನು ಮುದ್ರಿಸಿ ಸಚಿವ ದೇಶಪಾಂಡೆ ಅವರಿಗೆ 10 ಪ್ರಶ್ನೇಗಳನ್ನು ಕೇಳಿದ್ದು ಅದರಲ್ಲಿ ದೇಶಪಾಂಡೆ ಹಣ-ಹೆಂಡ ಹಂಚುತ್ತಾರೆ ಮತದಾರರು ಅದನ್ನು ಪಡೆಯುತ್ತಾರೆ ಎಂದು ಮತದಾರರನ್ನು ಅವಮಾನಿಸುವ ಪದಗಳನ್ನು ಬಳಸಿದ್ದು ಕೂಡಲೇ ಸುನೀಲ್ ಹೆಗಡೆ ಲಿಖಿತ ಹೇಳಿಕೆ ಮೂಲಕ ಬಹಿರಂಗವಾಗಿ ಕ್ಷೇತ್ರದ ಮತದಾರರ ಕ್ಷಮೆ ಕೇಳಬೇಕೆಂದು ಪ್ರಶಾಂತ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶಂಕರ ಬೆಳಗಾಂವಕರ, ಉಮೇಶ ಬೊಳಶೆಟ್ಟಿ, ಸುರೇಶ ತಳವಾರ, ಐಸಿ ಕಾಮಕರ, ಸತ್ಯಜೀತ ಗಿರಿ, ಶ್ರೀಪಾದ ಮಾನಗೆ, ಶಿವಪುತ್ರ ನುಚ್ಚಂಬ್ಲಿ, ಖಯ್ಯಾಮ ಮುಗದ, ಅರುಣ ಬೋಬಾಟಿ, ಪಿಎಸ್ ದಾನಪ್ಪನವರ, ಗುಲಾಬಷಾ ಲತಿಫನವರ ಮೊದಲಾದವರು ಇದ್ದರು.
Leave a Comment