ಹಳಿಯಾಳ : ಇಂದು ಹಳಿಯಾಳದಲ್ಲಿ ರಜನಿಕಾಂತ ಅಭಿನಯದ “ಕಾಲಾ” ಚಲನಚಿತ್ರ ಪ್ರಸಾರವನ್ನು ಹಳಿಯಾಳದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅದ್ಯಕ್ಷರಾದಂತಹ ಬಸವರಾಜ ಬೆಂಡಿಗೇರಿಮಠ್ ಇವರ ಸಾನಿಧ್ಯದಲ್ಲಿ ಬಸವರಾಜ ಟಾಕೀಸನಲ್ಲಿ ಪ್ರದರ್ಶನಗೊಳ್ಳಲಿರುವ “ಕಾಲಾ” ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು ಕಾರಣವೇನೆಂದರೆ ತಮಿಳು ನಟ ರಜನಿಕಾಂತರವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯಿಸುವ ಮೂಲಕ ಕನ್ನಡಿಗರಿಗೆ ನೋವಾಗುವಂತೆ ಮಾತನಾಡಿರುತ್ತಾರೆ. ಅವರ ಮಾತುಗಳಿಂದ ನೊಂದ ಕನ್ನಡಿಗರು ರಜನಿಕಾಂತರವರ ಅಭಿನಯದ “ಕಾಲಾ” ತಮಿಳು ಚಿತ್ರವನ್ನು ಬಸವರಾಜ ಟಾಕಿಸ್ ಹಳಿಯಾಳನಲ್ಲಿ ಪ್ರದರ್ಶನ ಮಾಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆಯವರು ಬಸವರಾಜ ಟಾಕಿಸ್ ಮಾಲಿಕನಿಗೆ ಮನವಿ ಸಲ್ಲಿಸಿದರು ಮನವಿ ಸ್ಫಂದಿಸಿದ ಮಾಲಿಕರು “ಕಾಲಾ” ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ಟಾಕಿಸಿನ ಸಂಚಾಲಕರಾದ “ಸಂಜು ಕಲ್ಯಾಣಕರ ಸಹಕರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕೃತರು ಚಂದ್ರಕಾಂತ ಬಿ ದುರ್ದ, ಮಹೇಶ ಆನೆಗುಂದಿ, ವಿನೋದ ದೊಡ್ಡಿಮನಿ, ಈರಯ್ಯಾ ಹೀರೆವ್ಮಠ, ಶ್ರೀ ಶೈಲ ಮಠದೇವರು, ಪ್ರಶಾಂತ ಪಾಟೀಲ್, ರಘು ಅಯ್ಯಂಗಾರ, ದೇಮಾಣಿ ದೇವಗಿರಿ, ವಿಜಯ ಪಡ್ನೀಸ್, ಸಚೀನ ಅಗಸರ, ನಾಗಯ್ಯಾ ಓಶಿಮಠ, ತುಕಾರಾಮ ಮಡಿವಾಳ, ಶಿವಾನಂದ ಶೆಟ್ಟಿ, ಶಿವಾನಂದ ಡಮ್ಮಣಗಿಮಠ, ಸುಧಾಕರ ಕುಂಬಾರ, ವಿನಾಯಕ ಮಡ್ಡಿ, ಮಂಜುನಾಥ ಹೊಂಡದಕಟ್ಟಿ, ಕಾಂತು ನೇವಗೇರಿ,ವಿನಾಯಕ ಶೆಟ್ಟಿ, ಕಾರ್ತಿಕ ಕಳ್ಳಿಮನಿ, ಶಿವಾನಂದ ಕರಜೇಂಕರ, ಚಣದ್ರಕಾಂತ ಅರಶೀನಗೇರಿ ಮುಂತಾದವರು ಉಪಸ್ಥಿತರಿದ್ದರು.
Leave a Comment