ಹಳಿಯಾಳ: ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ. ಜೀವನದ ಪ್ರಗತಿಗೆ ಯೋಗ ಅತೀ ಮುಖ್ಯವಾಗಿದ್ದು ಎಲ್ಲ ಯೋಗಗಳಿಗೆ ರಾಜನಾಗಿರುವುದೇ ಸಹಜ ರಾಜಯೋಗ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಡಾ||ಪದ್ಮಕ್ಕ ಹೇಳಿದರು. ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಯೋಗದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ “ಯೋಗ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಜ ರಾಜಯೋಗವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಎಲ್ಲ ಶಾಖಾ ಕೇಂದ್ರಗಳಲ್ಲಿ ಪ್ರತಿನಿತ್ಯ ಕಲಿಸುತ್ತಾರೆ. ರಾಜಯೋಗವನ್ನು ಮಾಡಿ ನಿಜವಾದ ಸುಖ ಶಾಂತಿ ಅನುಭವಿಸಿರಿ ಎಂದು ಕರೆ ನೀಡಿದರು. ಯೋಗ ಮಾರ್ಗದರ್ಶಕರಾದ ಕಾಜಗಾರವರು ಮಾತನಾಡಿ ಸೌಹಾರ್ಧತೆ ಮತ್ತು ಶಾಂತಿಗಾಗಿ ಯೋಗ ಮಾಡಬೇಕು. ಯೋಗದ ಮೂಲಕ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನಾವು ಭಗವಂತನ ಪ್ರಿತಿಗೆ ಪಾತ್ರರಾಗುತ್ತೇವೆಂದು ಅಭಿಪ್ರಾಯಪಟ್ಟರು. ಸಾಮಾಜಿಕ ಕಾರ್ಯಕರ್ತೆ ಶಾಂತಾ ಹಿರೆಕರ ಮಾತನಾಡಿ ಯೋಗ ಮನಸ್ಸನ್ನು ಶುದ್ಧಗೊಳಿಸುವ ಕಾರ್ಯಮಾಡುತ್ತದೆ ಕಾರಣ ಆರೋಗ್ಯವಂತ ಜೀವನಕ್ಕೆ ಯೋಗ ಅತಿ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಪರಶುರಾಮ, ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀ, ಶಿಕ್ಷಕ ಸಿದ್ದಪ್ಪ ಬಿರಾದಾರ ಇದ್ದರು.
Leave a Comment