• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ : ಖಜಾಂಚಿಯಾಗಿ ಕರವೇಯ ಬಸವರಾಜ ಬೇಂಡಿಗೇರಿಮಠ ಆಯ್ಕೆ

June 26, 2018 by Yogaraj SK 1 Comment

ಹಳಿಯಾಳ : ದೇಶದಲ್ಲಿ ಕೆಲವು ಭಾಗಗಳಲ್ಲಿ ಬಡತನ, ನಿರಕ್ಷರತೆ, ಮೂಢನಂಬಿಕೆ ಸೇರಿದಂತೆ ಇನ್ನಿತರ ಅನಾಚಾರಗಳು ತುಂಬಿ ತುಳುಕುತ್ತಿದ್ದು ಅವುಗಳನ್ನು ಸಮಾಜ ಸೇವಾ ಸಂಘ ಸಂಸ್ಥೆಗಳು ಹೊಗಲಾಡಿಸಲು ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಜಿಲ್ಲಾ ಲಯನ್ಸ್ ಗವರ್ನರ್ ಆನಂದ ಕಮಲಾಕರ ಅಭಿಪ್ರಾಯಪಟ್ಟರು.   ಪಟ್ಟಣದ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಹಳಿಯಾಳ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ  ನೂತನ ಅಧ್ಯಕ್ಷರಿಗೆ  ಪ್ರಮಾಣ ವಚನ ಭೋಧಿಸಿ ಮಾತನಾಡಿದ ಅವರು, ಕೇವಲ ಆರೋಗ್ಯ ಶಿಬಿರಗಳನ್ನು ನಡೆಸುವುದರಿಂದ ಸಮಾಜದ ಅಭಿವೃದ್ದಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದಾಗಿದೆ. ಅದಕ್ಕಾಗಿ ಲಾಯಿನ್ಸ್ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿ ಮಾಡುವಲ್ಲಿಯೂ ಸಂಸ್ಥೆ ಶ್ರಮಿಸಲಿದೆ ಎಂದರು.ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಮಾತನಾಡಿ ಸಮಾಜ ಸೇವೆ ಮತ್ತು ಅಭಿವೃದ್ದಿಯು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಅದನ್ನು ಕೆವಲ ಸರ್ಕಾರಗಳು ಮಾತ್ರ ಮಾಡಬೇಕು ಎಂಬ ಭಾವನೆ ತೊಲಗಿ ಸಂಘ ಸಂಸ್ಥೆಗಳು ಮತ್ತು ಸಮಾಜ ಸೇವಾ ಸಂಘಟನೆಗಳು ಅಭಿವೃದ್ದಿಗೆ ಮುಂದಾಗಬೇಕು. ಕಳೆದ 35 ವರ್ಷಗಳಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಲಾಯಿನ್ಸ್ ಕ್ಲಬ್‍ನಿಂದ ಈಗಾಗಲೇ ನೂರಾರು ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಗಳು ಸೇರಿದಂತೆ ನರರೋಗ, ಹೃದಯ ಸಂಬಂಧಿ ಕಾಯಿಲೆಗಳು, ಚರ್ಮ ವ್ಯಾದಿ ಇನ್ನಿತರ ರೋಗಗಳ ತಪಾಸಣಾ ಶಿಬಿರಗಳನ್ನು ನಡೆಸಿ ಎಲ್ಲ ವರ್ಗದವರಿಗೆ ಸಹಕರಿಸಿದೆ ಎಂದರು. ಸ್ವಚ್ಚ ಭಾರತ ಅಭಿಯಾನಕ್ಕೆ ಕೈ ಜೋಡಿಸಲಾಗಿದೆ ಎಂದ ಘೊಟ್ನೇಕರ ತಾಲೂಕಿನ ಕೆಲವು ಕಡೆಗಳಲ್ಲಿ ಕಿರು ಬಸ್ ನಿಲುಗಡೆಗಳನ್ನು ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವಾ ಕಾರ್ಯಗಳು ಲಯನ್ಸ್ ಕ್ಲಬ್‍ನಿಂದ ನಡೆಯಲಿವೆ ಎಂದರು.  ಹಳಿಯಾಳ ಲಯನ್ಸ್ ಕ್ಲಬ್‍ನ 2018-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹಾಂತೇಶ ಹಿರೇಮಠ ನಿರ್ಗಮಿತ ಅಧ್ಯಕ್ಷ ರಾಮಕೃಷ್ಣ ಘಟಕಾಂಬಳೆ ಅವರಿಂದ ಅಧಿಕಾರವನ್ನು ಪಡೆದುಕೊಂಡರು. ಕಾರ್ಯದರ್ಶಿಯಾಗಿ ಧರಣೇಂದ್ರ ಆಚಾರಿ ಮತ್ತು ಖಜಾಂಜಿಯಾಗಿ ಕರವೇ ಅಧ್ಯಕ್ಷರು ಆಗಿರುವ ಬಸವರಾಜ ಬೆಂಡಿಗೇರಿಮಠ ಅವರು ಅಧಿಕಾರ ವಹಿಸಿಕೊಂಡರು.  ಇದೇ ಸಂದರ್ಭದಲ್ಲಿ ರಮೇಶ ನಿಂಗನಮಠ, ವಿಠ್ಠಲ ಸೂರ್ಯವಂಶಿ, ರಾಜಾರಾಮ ಪಾಟೀಲ್, ದೇವೆಂದ್ರ ದಲಾಲ್, ಮೋಹನ ಶಿರೋಡಕರ, ಶಶಿಕಾಂತ ಬೆಳಗಾಂವಕರ, ಗಣಪತಿ ಹಳ್ಯಾಳಕರ ಮತ್ತು  ತ್ಯಾಗರಾಜ್ ಮಂಗನಗೌಡರ ಸದಸ್ಯರನ್ನಾಗಿ ಪ್ರಮಾಣ ವಚನ ಬೋಧಿಸಲಾಯಿತು.  ಸಮಾರಂಭದಲ್ಲಿ ಆರತಿ ಕಮಲಾಪೂರ, ಉಮೇಶ ಪಾಟೀಲ್, ಎನ್.ಎಸ್. ಉದ್ದಣ್ಣವರ, ಜಿ.ಡಿ.ಗಂಗಾಧರ್, ಆರ್.ಎಸ್.ಅರಶಿಣಗೇರಿ, ರಮೇಶ ಚವ್ಹಾಣ ಸೇರಿದಂತೆ ದಾಂಡೇಲಿ ಮತ್ತು ಅಳ್ನಾವರ ಪಟ್ಟಣದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಇದ್ದರು.

watermarked 26 hly 1 1 watermarked IMG 20180626 WA0219 1 watermarked IMG 20180626 WA0218 1 1 watermarked IMG 20180626 WA0216 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: ಆಯ್ಕೆ, ಕೆಡಿಸಿಸಿ ಬ್ಯಾಂಕ್ ಸಭಾಂಗಣ, ಖಜಾಂಚಿಯಾಗಿ ಕರವೇಯ, ನಿರಕ್ಷರತೆ, ಪದಾಧಿಕಾರಿಗಳ ಪದಗ್ರಹಣ, ಬಸವರಾಜ ಬೇಂಡಿಗೇರಿಮಠ, ಮೂಢನಂಬಿಕೆ, ಲಯನ್ಸ್ ಕ್ಲಬ್ ನೂತನ, ಸಮಾಜದ ಅಭಿವೃದ್ದಿ, ಹಳಿಯಾಳ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Comments

  1. GOVIND V KOLADAR says

    June 28, 2018 at 3:28 am

    Congratulations sir. Sri S R MANGANGOUDRA. OUR SOCIETY MANAGER. AND. SRI D R. ACHARI SIR. MANAGER THE K D C C BANK HALIYAL ,. SRI SHASHIKANTH BELAGAOKAR SUPERVISOR KDCC BANK HALIYAL, DEVENDRA DALAL SECRETARY NANDIGADDA SOCIETY CONGRATULATIONS SIRS

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...