ಹಳಿಯಾಳ: ಅಟಲ್ ಬಿಹಾರಿ ವಾಜಪೇಯಿ ದೇಶಕಂಡ ಮಹಾನ್ ನಾಯಕ. ಅವರ ನಾಯಕತ್ವ ಹಾಗೂ ಕೆಚ್ಚದೇಯ ಧೈರ್ಯ, ದೇಶದ ಬಗ್ಗೆ ಅಭಿಮಾನ ಈ ಜಗತ್ತು ಯಾವತ್ತೂ ಮರೆಯಲು ಸಾಧ್ಯವಿಲ್ಲ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಪ್ರತಿಯೊಂದು ಆದರ್ಶ ತತ್ವಗಳು ನಮಗೆ ದಾರಿದೀಪವಾಗಲಿವೆ ಎಂದು ಬಿಜೆಪಿ ಪಕ್ಷ ಜಿಲ್ಲಾ ಮುಖಂಡ ಪ್ರಮೋದ ಹೆಗಡೆ ಹೇಳಿದರು.
ಪಟ್ಟಣದ ಗಣೇಶ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ತಾಲೂಕು ಬಿಜೆಪಿ ಘಟಕ, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ದೇಶದ ಬಗ್ಗೆ ಅಪಾರ ಪ್ರಮಾಣದ ಪ್ರೀತಿಯನ್ನು ಹೊಂದಿದ ವಾಜಪೇಯಿಯವರು ದೇಶದ ಪ್ರತಿಯೊಂದು ಸಾಮಾನ್ಯ ವ್ಯಕ್ತಿಯಿಂದ ಎಲ್ಲಾ ಪಕ್ಷದ ರಾಜಕಾರಣಿಗಳ ಮನಸ್ಸನ್ನು ಗೆದ್ದವರು. ಅದರಲ್ಲೂ ದೇಶದ ಬಗ್ಗೆ ವಿಷಯ ಬಂದಾಗ ಪ್ರಾಣದ ಬಗ್ಗೆಯೂ ಚಿಂತಿಸದೆ ದೇಶರಕ್ಷಣೆ ಮಾಡುವಲ್ಲಿ ಗಮನಹರಿಸುವ ಗುಣ ಅವರದ್ದಾಗಿತ್ತು. ಅದಕ್ಕೆ ಉತ್ತಮ ಉದಾಹರಣೆ ಕಾರ್ಗೀಲ್ ಯುದ್ದ ಹಾಗೂ ಸಂಸದ ದಾಳಿಯ ವೇಳೆ ಅವರು ತೆಗೆದುಕೊಂಡ ನಿರ್ಧಾರಗಳು ಎಂದ ಅವರು ಯಾರ ಹತ್ತಿರ ದ್ವೇಷವನ್ನು ಸಾಧಿಸದೆ ಪ್ರೀತಿಯಿಂದ ಬಾಳುತ್ತಿದ್ದ ಅಜಾತಶುತ್ರ ಯಾವತ್ತೂ ಅಮರವಾಗಿದ್ದಾರೆ ಎಂದರು.
ಮುಖಂಡರಾದ ಶ್ರೀಕಾಂತ ಹೂಲಿ, ಮಂಗೇಶ ದೇಶಪಾಂಡೆ, ಅಲಿನ ಮುತ್ನಾಳೆ, ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ವಾಸು ಪೂಜಾರಿ, ಸಂತೋಷ ಘಟಕಾಂಬ್ಳೆ, ಎಸ್ ಶಟವಣ್ಣವರ, ಜಯಲಕ್ಷ್ಮೀಚವ್ಹಾಣ, ಶಾಂತಾ ಹೀರೆಕರ, ಪ್ರದೀಪ ಹೀರೆಕರ, ನಸ್ರಲ್ಲಾಖಾನ, ಮಾಲಾ ಹುಂಡೇಕರ, ಸಿದ್ದು ಶೆಟ್ಟಿ, ರಾಜು ಹಳ್ಳುಕರ, ವಿಜಯ ಬೊಬಾಟಿ, ತಾಜಾನಿ ಪಟ್ಟೇಕರ ಇತರರು ಇದ್ದರು.
Leave a Comment