

ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೂವರು ಹಳಬರನ್ನು ಹೊರತು ಪಡಿಸಿದರೇ 19 ಜನ ಹೊಸ ಮುಖಗಳು ಪಾದಾರ್ಪಣೆ ಮಾಡಿವೆ.
ಪಟ್ಟಣದ ವಾರ್ಡ ನಂ-3 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಅದೃಷ್ಠ ಪರೀಕ್ಷೆಗೆ ಇಳಿದಿದ್ದ ನವೀನ ಕಾಟಕರ ವಿಜಯ ಸಾಧಿಸಿ ಅತಿ ಕಿರಿಯ(25 ವರ್ಷ) ವಯಸ್ಸಿನ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾನೆ.
ಇನ್ನೂ ಕಾಂಗ್ರೇಸ್ಸಿನಿಂದ ಸುರೇಶ ತಳವಾರ ಸತತ 3 ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದರೇ, ಶಂಕರ ಬೆಳಗಾಂವಕರ 3 ಬಾರಿ ಆಯ್ಕೆಯಾಗಿ ದಾಖಲೆ ಮಾಡಿದ್ದಾರೆ.
ವಾರ್ಡ ನಂ-6ರಲ್ಲಿ ಕಾಂಗ್ರೇಸ್ ಅಭ್ಯರ್ಥಿ ಅಜರುದ್ದಿನ ಬಸರೀಕಟ್ಟಿ ಅತೀ ಹೆಚ್ಚು 558 ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೇ ವಾರ್ಡ ನಂ-20 ರ ಅಭ್ಯರ್ಥಿ ಫಯಾಜಮ್ಮದ ಶೇಖ 365 ಹಾಗೂ ವಾರ್ಡ ನಂ-1ರ ಅಭ್ಯರ್ಥಿ ಚಂದ್ರಕಾಂತ ಕಮ್ಮಾರ 219 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನೂ ವಾರ್ಡ ನಂ-4ರಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥ ಗಜಾಕೋಶ ಕೇವಲ 4 ಮತಗಳ ಅಂತರದಿಂದ, ವಾರ್ಡ-ನಂ5ರಲ್ಲಿ ಪಕ್ಷೇತರ ಅಭ್ಯರ್ಥಿ ಸಿದ್ರಾಮಪ್ಪಾ ದಾನಪ್ಪನವರ 9ಮತಗಳು ಹಾಗೂ ವಾರ್ಡ ನಂ-10ರಲ್ಲಿ ಬಿಜೆಪಿಯ ಆನಂದ ಕಂಚನಾಳಕರ 14 ಮತಗಳ ಅಂತರದಿಂದ ಸೋಲನುಭವಿಸಿದ್ದು ಗಮನಾರ್ಹವಾಗಿದೆ.
5 ವರ್ಷಗಳ ಕಾಲ ಆಡಳಿತ ನಡೆಸಿದ ಪುರಸಭೆಗೆ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಶಾಸಕ ಹಾಗೂ ಪ್ರಭಾವಿ ಸಚಿವ ಆರ್.ವಿ.ದೇಶಪಾಂಡೆ ಅವರು ನೂರಾರು ಕೊಟಿ ರೂ. ಅನುದಾನ ಮಂಜೂರಿ ಮಾಡಿಸಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಳಿಯಾಳ ತಾಲೂಕನ್ನು ನೊಡಲ್ ತಾಲೂಕಾಗಿ ಆಯ್ಕೆಮಾಡಿಕೊಂಡು ಹಳಿಯಾಳ ಪಟ್ಟಣದಲ್ಲಿ ಸಕ್ರೀಯ ರಾಜಕಾರಣ ನಿರ್ವಹಿಸುತ್ತಿರುವುದು. ಪಟ್ಟಣದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಕಾಂಗ್ರೇಸ್ ಪಕ್ಷದ ಬಗ್ಗೆ ಹೊಂದಿರುವ ಮೃದು ಧೋರಣೆ ಹಾಗೂ ಹಳಿಯಾಳ ಪಟ್ಟಣ ಕಾಂಗ್ರೇಸ್‍ನ ಭದ್ರಕೋಟೆಯಾಗಿರುವುದು ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಲು ಹೊಂದಿರುವ ಪ್ರಮುಖ ಕಾರಣಗಳಾಗಿವೆ.
Leave a Comment