ಹಳಿಯಾಳ: ಹಳಿಯಾಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಏನೋ ಏರಲಿದೆ ಆದರೇ, ಸಚಿವ ಆರ್.ವಿ.ದೇಶಪಾಂಡೆ ಅವರ ಸ್ವಕ್ಷೇತ್ರ ಅವರು ನಿವಾಸ ಹೊಂದಿರುವ ವಾರ್ಡನಲ್ಲೇ ಕಾಂಗ್ರೇಸ್ ಅಭ್ಯರ್ಥಿ ಸೋಲನುಭವಿಸಿದ್ದು ಹಳಿಯಾಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದ ವಾರ್ಡ ನಂ14- ಮುಖ್ಯಬೀದಿಯನ್ನು ಒಳಗೊಂಡಿದ್ದು ಇಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರ ನಿವಾಸವು ಇದೆ. ಇದೇ ವಾರ್ಡನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸತ್ಯಜೀತ ಗಿರಿ ಈ ಹಿಂದೆ 2 ಬಾರಿ ಆಯ್ಕೆಯಾಗಿ ಉಪಾಧ್ಯಕ್ಷ ಸ್ಥಾನ, ಸ್ಥಾಯಿಸಮೀತಿ ಅಧ್ಯಕ್ಷಸ್ಥಾನವನ್ನು ಅಲಂಕರಿಸಿದ್ದಾರೆ. ಆದರೇ ಈ ಬಾರಿ ಬಿಜೆಪಿಯ ಅಭ್ಯರ್ಥಿ ಉದಯಕುಮಾರ ಹೂಲಿ ಎದುರು ಸೋಲನುಭವಿಸಿದ್ದಾರೆ.
ಪುರಸಭೆಯ ಕಳೆದ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದವು ಅಲ್ಲದೇ ಕೆಲವರ ವಿರುದ್ದ ಪಟ್ಟಣದಲ್ಲಿ ಬಹಿರಂಗ ಅಸಮಾಧಾನವು ಕೇಳಿ ಬಂದಿತ್ತು. ವಾರ್ಡ ನಂ14 ಕೊನೆ ಕ್ಷಣದಲ್ಲಿ ಮೀಸಲಾತಿ ಬದಲಾಗಿ ಸತ್ಯಜೀತ ಗಿರಿ ಮತ್ತೇ ಚುನಾವಣಾ ಅಖಾಡಕ್ಕೆ ಧುಮುಕಿದ್ದರು.
ಸ್ವಕ್ಷೇತ್ರ ಹಳಿಯಾಳ ಪಟ್ಟಣದಲ್ಲಿ ಅದು ತಮ್ಮ ವಾರ್ಡನಲ್ಲೇ ಸಚಿವರ ಆಪ್ತರಲ್ಲೊಬ್ಬರಾದ ಕಾಂಗ್ರೇಸ್ ಅಭ್ಯರ್ಥಿ ಸೋಲನುಭವಿಸಿದ್ದು ಆಡಳಿತ ವಿರೋಧಿ ಅಲೆಯೇ ಅವರ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದ್ದರೇ ಇನ್ನೊಂದೆಡೆ ಸಚಿವರ ವಾರ್ಡನಲ್ಲಿಯೇ ಕಾಂಗ್ರೇಸ್ ಪರಾಜಯವಾಗಿರುವುದು ಹಲವರಿಗೆ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.
Leave a Comment