ಹಳಿಯಾಳ : ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಹೃದಯ ಭಾಗದ ಜನನಿಬಿಡ ಪ್ರದೇಶದಲ್ಲಿ ಬಹಿರಂಗ ಹಾಗೂ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಆದರೇ ಈ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸಂಬಂಧಪಟ್ಟ ಇಲಾಖೆಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಹಳಿಯಾಳದ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಕರವೇ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಹಲವು ದಶಕಗಳಿಂದ ಗೋಹತ್ಯೆ, ಕಾನೂನು ಬಾಹಿರವಾಗಿ ನಡೆಸಲಾಗುತ್ತಿದ್ದರು ಸಹ ಈ ವರೆಗೆ ಯಾವುದೇ ರೀತಿಯ ಕ್ರಮ ಕೈಗೋಳ್ಳಲಾಗಿಲ್ಲವೆಂಬುದು ಅಷ್ಟೇ ಸತ್ಯ. ಇದು ಜನತೆಯ ತೀವೃ ಅಸಮಾಧಾನಕ್ಕೂ ಕಾರಣವಾಗಿದೆ.
ಎಲ್ಲೆಂದರಲ್ಲಿ ದನದ ಮಾಂಸ, ಎಲುವುಗಳು :- ಪಟ್ಟಣದ ಹೃದಯಭಾಗ ಎಂದು ಕರೆಯಲಾಗುವ ಮುಖ್ಯಬೀದಿ, ಬಜಾರ್, ಬಸ್ ನಿಲ್ದಾಣ, ಆನೆಗುಂದಿ ಬಡಾವಣೆ, ಚಲವಾದಿಗಲ್ಲಿ ಸೇರಿದಂತೆ ಮೇದಾರಗಲ್ಲಿ ಒಳಗೊಂಡ ಜನನಿಬಿಡ ಪ್ರದೇಶದ ಮಧ್ಯೆದಲ್ಲೇ ಇರುವ ಕಳೆದ 2 ದಶಕಗಳಿಂದ ಅವ್ಯಾಹತವಾಗಿ ಗೋ ಹತ್ಯೆಯನ್ನು ಮಾಡುವ ಕಸಾಯಿ ಖಾನೆಯು ಕಾರ್ಯ ನಿರ್ವಹಿಸುತ್ತಿದ್ದು. ಇದರಿಂದ ಪ್ರಮುಖವಾಗಿ ಪರಿಸರಕ್ಕೆ ಹಾನಿಯಾಗುತ್ತಿರುವುದಲ್ಲದೆ, ಗೋ ಮಾಂಸದ ಆಸೆಗಾಗಿ ಬೆನ್ನು ಬಿದ್ದ ಬಿಡಾಡಿ ನಾಯಿಗಳು ಮಾಂಸ ತಿನ್ನುವ ನೆಪದಲ್ಲಿ ದನಗಳ ಎಲುವುಗಳನ್ನು ತಂದು ಅಲ್ಲಲ್ಲಿ ವಿಷೇಶವಾಗಿ ದೇವಸ್ಥಾನ, ಮನೆಗಳ ಮುಂದೆ, ಸಮಿಪದಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ.
ಅನಾರೋಗ್ಯದ ಬೀಡು:- ಗೋವು, ಎಮ್ಮೆ, ಕರು, ಎತ್ತುಗಳ ಹತ್ಯೆ ಇಲ್ಲಿ ನೀರಂತರವಾಗಿ ನಡೆಯುತ್ತಿದ್ದು. ಈ ಕಸಾಯಿಖಾನೆಗಳ ಮುಂದಿನ ಗಟಾರಗಳಿಂದ ರಕ್ತದ ಕೊಡಿಯು ಹರಿಯುತ್ತಿದ್ದು ಅಲ್ಲಲ್ಲಿ ಗಟಾರಗಳು ಹುಳಿನಿಂದ ತುಂಬಿರುವುದರಿಂದ ಇಲ್ಲಿಂದ ಹರಿಯುವ ಮಲೀನ ರಕ್ತದಿಂದ ಕೂಡಿದ ನೀರು ನಿಂತು ರೋಗಗಳು ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅಲ್ಲದೇ ಗಬ್ಬು ವಾಸನೆ ಪರಿಸರದ ತುಂಬೆಲ್ಲ ಹರಡುತ್ತಿದೆ. ಇನ್ನೂ ದನಗಳ ಮಾಂಸಗಳ ಪಳೆಯುಳಿಕೆಗಳು ಹಾಗೂ ಅದರ ಹತ್ಯೆಯ ನಂತರ ಶರಿರದಿಂದ ಹೊರ ಬಿಳುವ ಕಲ್ಮಶ ಪದಾರ್ಥದ ಕ್ರೂಡಿಕರಣದಿಂದ ಹರಡುವಂತಹ ದುರ್ವಾಸನೆ ವಾಯುಮಾಲಿನ್ಯ ಪರಿಣಾಮವಾಗಿ ಹಬ್ಬುವಂತಹ ವಿವಿಧ ಪ್ರಕಾರಗಳ ರೋಗಗಳು ಜನರಿಗೆ ಬಾದಕ ಗೋಳಿಸುತ್ತಿರುವುದು. ಈ ಭಾಗವೆಲ್ಲ ಅನಾರೋಗ್ಯದ ಬೀಡಾಗಿ ಪರಿವರ್ತನೆಗೊಂಡಿದ್ದು ಜನತೆಯನ್ನು ಕಂಗಾಲಾಗಿಸಿದೆ.
ಕ್ರಮವಿಲ್ಲ :- ಈ ಎಲ್ಲ ಕಾರಣಗಳಿಂದ ಈ ಪರಿಸರದಲ್ಲಿ ವಾಸಿಸುತ್ತಿರುವ ಜನರು ಕಸಾಯಿ ಖಾನೆ ಸ್ಥಳಾಂತರಗೊಳಿಸಿ ಅಥವಾ ಸ್ಥಗಿತಗೊಳಿಸಿ ಎಂದು ನೂರಾರು ಬಾರಿ ಲಿಖಿತ ಮನವಿಗಳನ್ನು, ಪತ್ರಿಕಾ ಹೇಳಿಕೆಗಳನ್ನು ನಿಡಿದ್ದಲ್ಲದೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜನತೆಯ ಕಣ್ಣೊರೆಸುವ ತಂತ್ರ ಬಳಸಿದ ತಾಲೂಕಾಡಳಿತ ಕಸಾಯಿ ಖಾನೆಗೆ ಬೀಗ ಏನೋ ಹಾಕಿತ್ತು ಆದರೇ ಅದು ಕೆಲವೆ ಕೆಲವು ತಿಂಗಳು ಮಾತ್ರ ಜಾರಿಯಾಯಿತು. ತದ ನಂತರ ಕಸಾಯಿಗಳು ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದು ಈ ಭಾಗದಲ್ಲೇ ಮನೆಗಳ ಮುಂದೆ ಅವ್ಯಾಹತವಾಗಿ ಗೋ ಹತ್ಯೆ ನಡೆಸುತ್ತಿದ್ದಾರೆ. ಈ ಬಗ್ಗೆ ಜನತೆ ತಾಲೂಕಾಡಳಿತ, ಪಟ್ಟಣ ಪಂಚಾಯತಿ ಹಾಗೂ ಈ ಭಾಗದ ಪ.ಪಂ. ಸದಸ್ಯರು, ಅಧ್ಯಕ್ಷರ ಗಮನಕ್ಕೆ ತಂದರೂ ಈವರೆಗೆ ಯಾವುದೇ ರೀತಿಯ ಕ್ರಮ ಜರುಗಿಸಲಾಗುತ್ತಿಲ್ಲದಿರುವುದು ಜನತೆಯ ದುರದೃಷ್ಟವೇ ಸರಿ.
ಪ್ರತಿಭಟನೆ ಎಚ್ಚರಿಕೆ :- ಈ ಅನಧಿಕೃತ ಕಸಾಯಿಖಾನೆಯ ಬಗ್ಗೆ ಪಟ್ಟಣದ ವಿಶ್ವ ಹಿಂದೂ ಪರಿಷದ್, ಹಿಂದೂ ಜನಜಾಗೃತಿ ಸಮೀತಿ, ಶ್ರೀರಾಮ ಸೇನೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನೀಕರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಕ್ರಮ ಜರುಗಿಸದೆ ಇದ್ದರೇ ಪ್ರತಿಭಟನೆ ನಡೆಸುವ ತಯಾರಿಯಲ್ಲಿದ್ದಾರೆ.
Leave a Comment