ಹಳಿಯಾಳ :- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2018-19ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆಂದು ಪ್ರಾಂಶುಪಾಲ ಡಾ. ವಿ.ವಿ. ಕಟ್ಟಿ ತಿಳಿಸಿದ್ದಾರೆ.
ಬೆಳಗಾವಿಯ ನಿಡಸೋಸಿಯ ಹೀರಾ ಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ ಟೇಬಲ್ ಟೆನಿಸ್ ತಂಡದ ವಿದ್ಯಾರ್ಥಿಗಳಾದ ಪುನಿತ್ ಚೋಪಡೆ, ಅಗ್ರಜ ಎಮ್, ಕಾರ್ತಿಕ್ ಡಿ ಮತ್ತು ಅಖಿಲ್ ಕಟ್ಟಿ ಭಾಗವಹಿಸಿ ವಿಭಾಗ ಮಟ್ಟದಲ್ಲಿ 2ನೇ ಸ್ಥಾನಗಳಿಸಿದೆ.
ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪಾ ಯಳ್ಳೂರ್, ಅವರು ಮಹಾವಿದ್ಯಾಲಯದ ತಂಡಕ್ಕೆ ತರಬೇತಿಯನ್ನು ನೀಡಿದ್ದರು.
Leave a Comment