ಹಳಿಯಾಳ: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲೂ ಆಸಕ್ತಿ ವಹಿಸಿ ಸಾಧನೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದುವಂತೆ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ಕಳೆದ 3 ದಶಕಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎನ್.ಎಸ್.ಪಾಟೀಲ್ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಎನ್.ಎಸ್.ನಸಬಿ ಅವರನ್ನು ವಿಪ ಸದಸ್ಯ ಘೋಟ್ನೇಕರ ಸನ್ಮಾನಿಸಿವ, ಗೌರವಿಸಿದರು.
ವೇದಿಕೆಯಲ್ಲಿ ಕಾವಲವಾಡ ಎಸ್‍ಡಿಎಮ್‍ಸಿ ಅಧ್ಯಕ್ಷ ಬಾಬು ಮಿರಾಶಿ, ಜಿ.ಪಂ ಸದಸ್ಯೆ ಲಕ್ಷ್ಮೀ ಕೋರ್ವೆಕರ, ಪ್ರಮುಖರಾದ ಸತೀಶ ನಾಯ್ಕ ಭಾವಿಕೇರಿ, ಸಲೀಂ ಜಮಾದಾರ, ವಾಣೀಶ ನಾಯಕ, ಸುರೇಶ ನಾಯಕ, ಕೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ, ಜಿ.ಎಸ್.ಮಠಪತಿ, ಅರುಂಧತಿ ದೇಸಾಯಿ ಇದ್ದರು. 37 ಪ್ರೌಢ ಶಾಲೆ ದೈಹಿಕ ಶಿಕ್ಷಕರು ಸುಮಾರು 800 ಕ್ರೀಡಾಪಟುಗಳು ಭಾಗವಹಿಸಿದ್ದರು.
Leave a Comment