ಹಳಿಯಾಳ :
ಸರ್ಕಾರ ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ಸಂಪೂರ್ಣ ಪ್ರಯೋಜನ ಪಡೆದುಕೊಂಡು, ಮಹಿಳೆಯರು ವಿವಿಧ ಉದ್ಯೋಗಗಳಲ್ಲಿ ಕೌಶಲಗಳನ್ನು ಬೆಳಸಿಕೊಂಡು ಚಿಕ್ಕ ಚಿಕ್ಕ ಉದ್ಯಮಿಗಳನ್ನು ಪ್ರಾರಂಭಿಸಿ ಆ ಮೂಲಕ ಇನ್ನಷ್ಟು ಮಹಿಳೆಯರಿಗೆ ಉದ್ಯೋಗ ನೀಡುವತ್ತ ದಾಪುಗಾಲು ಹಾಕಬೇಕೆಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು.
ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆÀ, ದೇಶಪಾಂಡೆ ರುಡಸೆಟಿ, ಪುರಸಭೆ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಭಾಭವನದಲ್ಲಿ ನಡೆದ “ಮಹಿಳೆಯರ ಸಬಲೀಕರಣದತ್ತ ಒಂದು ಹೆಜ್ಜೆ” ಎಂಬ ಒಂದು ದಿನದ ಕಾರ್ಯಾಗಾರ ಮತ್ತು ಮಹಿಳಾ ಸಂಘಗಳು ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ ಮಾತನಾಡಿ ಮಹಿಳೆಯರಿಗೆ ಸೂಕ್ತವಾದ ಮಾಗದರ್ಶನ, ತರಬೇತಿ ಹಾಗೂ ಅವಕಾಶಗಳ ಕುರಿತು ಮಾಹಿತಿ ನೀಡಬೇಕಾಗಿದ್ದು, ಉದ್ಯೋಗ, ಮಾರುಕಟ್ಟೆ ಮತ್ತು ವಸ್ತುಗಳ ಉತ್ಪಾದನೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅರಿವು ಮೂಡಿಸಿಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ತ್ರೀ ಸಂಘಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ತಾಲೂಕಿನ 50ಕ್ಕೂ ಅಧಿಕ ಸ್ತ್ರೀ ಶಕ್ತಿ ಕೇಂದ್ರಗಳ ಮೂನ್ನೂರಕ್ಕೂ ಅಧಿಕ ಮಹಿಳೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಳಾ ಕಶೀಲ್ಕರ, ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಬೆಂಡೀಗೇರಿಮಠ, ರುಡಸೆಟಿಯ ಸಂಯೋಜನಾಧಿಕಾರಿ ಸಂತೋಷ ಪರೀಟ, ಆರ್ಥಿಕ ಸಾಕ್ಷರಾತ ಅಧಿಕಾರಿ ಕೃಷ್ಣಾ ಪುರೋಹಿತ, ಮಂಜುನಾಥ ಮಾದರ, ಸಿಡಿಪಿಓ ಕಚೇರಿಯ ಮೇಲ್ವಿಚಾರಕಿಯರಾದ ಸುವರ್ಣಾ ಪೂಜಾರ, ಅಂಬಿಕಾ ಕಟಕೆ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಧಾ ಬಾಂದೇಕರ ಇದ್ದರು.
Leave a Comment