ಹಳಿಯಾಳ :- ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳು ಸಮಸ್ಯೆಗೆ ಪರಿಹಾರ ನೀಡಬೇಕು ಹಾಗೂ ಕಟ್ಟಡ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನವೆಂಬರ್ ದಿ.2 ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಹಳಿಯಾಳದ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ಸಂಘಟನೆ ರಾಜ್ಯ ಉಪಾಧ್ಯಕ್ಷ ಹರೀಶ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಕಟ್ಟಡ ಕಾರ್ಮಿಕರ ಸಂಘದ ಮುಖಂಡರೊಂದಿಗೆ ಜಂಟಿಯಾಗಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮರಳು ಕೊರತೆ ತಲೆದೂರಿದ್ದು ಕಟ್ಟಡ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಕೆಲಸಗಳನ್ನು ಹುಡುಕಿಕೊಂಡು ಗೋವಾ, ಮಹಾರಾಷ್ಟ್ರದ ಕಡೆಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆಯು ಉಲ್ಭಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ನಾಯ್ಕ ಕೂಡಲೇ ಸಂಪ್ರಾದಾಯಿಕ ಮರಳುಗಾರಿಕೆಗೆ ಸರ್ಕಾರ ಅನಮತಿ ನೀಡಬೆಕೆಂದು ಆಗ್ರಹಿಸಿದರು.
ರಾಷ್ಟ್ರಿಯ ಹಸಿರು ಪೀಠ ಮರಳುಗಾರಿಕೆಯನ್ನು ನಿಷೇಧಿಸಿದೆ ಸರ್ಕಾರ ಕಾನೂನು ಮಾಡುವ ಮೂಲಕ ಪರಿಸರ ಸ್ನೇಹಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ಕೊಡಬೇಕು. ರಾಷ್ಟ್ರೀಯ ಹಸಿರು ಪೀಠ ಮರಳುಗಾರಿಕೆ ನಿಷೇಧಿಸಿರುವುದು ಮರಳು ಮಾಫಿಯಾಗಳಿಗೆ ವರದಾನವಾಗಿದೆ. ಮರಳು ಮಾಫಿಯಾಗಳು ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ಚುರುಕುಗೊಂಡಿದ್ದು ಇದಕ್ಕೆ ಕಡಿವಾಣ ಹಾಕಬೇಕು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ನೋಂದಾವಣಿಯಾಗುತ್ತಿಲ್ಲಾ, ಖಾಯಂ ಕಾರ್ಮಿಕ ಅಧಿಕಾರಿ ಇಲ್ಲಾ. ಕಾರ್ಮಿಕರ ಮಂಡಳಿಯು ಐಕ್ಯ ಎಂಬ ಏಜನ್ಸಿಗೆ ಕಾರ್ಮಿಕರ ನೊಂದಾವಣಿ ಮಾಡಲು ಪರವಾಣಿಗೆ ಕೊಟ್ಟಿದೆ. ಐಕ್ಯ ಏಜನ್ಸಿಯವರು ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ನೋಂದಾವಣಿ ಮಾಡುವುದರಿಂದ ನೈಜ್ಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗಿದೆ. ಮಂಡಳಿಯಲ್ಲಿ 9 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾದರು ಕಾರ್ಮಿಕರಿಗೆ ಸಕಾಲದಲ್ಲಿ ಸೌಲಭ್ಯಗಳು ದೊರಕುತ್ತಿಲ್ಲಾ. ಕಾರ್ಮಿಕರ ಕಛೇರಿಯಲ್ಲಿ ಸೌಲಭ್ಯದ ಅರ್ಜಿ ಸಲ್ಲಿಸುವಾಗ ಚೆಕ್ಕ್ ಲೀಸ್ಟ ಹೊರತು ಪಡಿಸಿ ಇಲ್ಲ ಸಲ್ಲದ ಕಾಗದ ಪತ್ರಗಳನ್ನು ಕೇಳಿ ಕಿರುಕುಳ ನೀಡಲಾಗುತ್ತಿದೆ ಎಂದು ಹರೀಶ ಆರೋಪಿಸಿದರು.
ಪತ್ರಿಕಾಗೊಷ್ಠೀಯ ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಮರಳು ನೀತಿ ಸರಳಿಕರಿಸಿ ಮರಳು ಕಲೆ ಹಾಕುವ ಕಾರ್ಮಿಕರಿಗೆ ಕಾನೂನು ಬದ್ಧ ಪರವಾನಿಗೆ ಕೊಡಬೇಕು. ಕಟ್ಟಡ ಕಾರ್ಮಿಕರನ್ನು ಮಂಡಳಿಯಲ್ಲಿ ನೋಂದಾಯಿಸುವ ಕೆಲಸ ಮಾಡುತ್ತಿರುವ ಐಕ್ಯ ಏಂಜನ್ಸಿ ಕಾರ್ಮಿಕರಲ್ಲದವರನ್ನು ನೊಂದಾಯಿಸುತ್ತಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರ ಫಲಾನುಭವಿಗಳ ಸೌಲಭ್ಯಗಳ ಅರ್ಜಿ ಸಲ್ಲಿಸುವಾಗ ಚೆಕ್ ಲಿಸ್ಟ ಬಿಟ್ಟು ಇಲ್ಲ ಸಲ್ಲದ ಕಾಗದ ಪತ್ರಗಳನ್ನು ಕೇಳುತ್ತಿದ್ದು ಸರ್ಕಾರ ಗಮನ ಹರಿಸಬೇಕು. ನೊಂದಣಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನೊಂದಣಿ ವಿಳಂಬ ನೀತಿ ಅನುಸರಿಸುವುದಕ್ಕೆ ಕಡಿವಾಣ ಹಾಕಬೇಕು. ಫಲಾನುಭವಿಗಳ ನೊಂದಣಿ ಅರ್ಜಿ ತಕ್ಷಣ ಸ್ವೀಕರಿಸಿ ಸ್ವೀಕೃತಿ ನೀಡಬೇಕು. ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿಯ ನೇಮಕ, ಜಿಲ್ಲೆಯ ಎಲ್ಲ ಕಾರ್ಮಿಕರ ನಿರೀಕ್ಷಕರ ಕಛೇರಿಗೆ ಕಾರ್ಮಿಕ ನಿರೀಕ್ಷರನ್ನು ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಪೂರ್ಣಾವಧಿಗೆ ನೇಮಿಸಬೇಕೆಂದು ಆಗ್ರಹಿಸಲಾಗಿದೆ.
ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ದುರಂತದಲ್ಲಿ ಯುವ ಕಾರ್ಮಿಕನೊರ್ವ ಮೃತಪಟ್ಟಿರುವುದನ್ನು ಖಂಡಿಸಿದ ಹರೀಶ ನಾಯ್ಕ ಕಂಪೆನಿಯಲ್ಲಿ ಗುತ್ತಿಗೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಇದನ್ನು ಸಿಐಟಿಯು ಸಂಘಟನೆ ಖಂಡಿಸುತ್ತದೆ. ಇಎಸ್‍ಐ ಆಕರಣೆ ಮಾಡಿಯೇ ಕಾರ್ಮಿಕರನ್ನು ಕಂಪೆನಿಯ ಒಳಗೆ ತೆಗೆದುಕೊಳ್ಳಬೇಕು ಆದರೇ ಕಂಪೆನಿಯಲ್ಲಿ ಈ ಬಗ್ಗೆ ಕಾರ್ಮಿಕರಿಗೆ ಮೊಸ ಮಾಡಲಾಗಿದೆ ಎಂದು ಕಾರ್ಮಿಕರು ದೂರುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿದರು.
ಸುದ್ದಿಗೊಷ್ಠೀಯಲ್ಲಿ ಜಯಶ್ರೀ ಹಿರೇಕರ, ರೇಣುಕಾ ಹಣಬರ, ಬ್ರಿಜೆಟಾ ಬ್ರಗಾಂಜಾ, ಕೃಷ್ಣ ಭಟ್, ಪ್ರಕಾಶ ಚೆನ್ನಾಬತ್ತಿ ಇದ್ದರು.
Leave a Comment