ಹಳಿಯಾಳ:- ಹಳಿಯಾಳದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ವಿರುದ್ದ ಹಾಗೂ ಸದ್ಯ ಹಬ್ಬದ ನೆಪದಿಂದ ಜೂಜಾಟ ನಡೆಸುವ ತಯಾರಿಯಲ್ಲಿರುವವರ ಮೇಲೆ ಪೋಲಿಸ್ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜೂಜಾಟ, ಇಸ್ಪಿಟ್ ರಮ್ಮಿ ಕ್ಲಬ್‍ಗಳು ಇತರ ಅಕ್ರಮಗಳ ವಿರುದ್ದ ಸಂಬಂಧಪಟ್ಟವರು ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಾವು ಯಾವಾಗಲೂ ಅಕ್ರಮ ಚಟುವಟಿಕೆಗಳ ನಡೆಸುವವರ ವಿರುದ್ದ ಇದ್ದೇವೆ ಎಂದ ಹೆಗಡೆ ನಾವು ಅಂತಹುದಕ್ಕೆ ಪ್ರೋತ್ಸಾಹನ ನೀಡುವುದಿಲ್ಲ ಬದಲಾಗಿ ತೀವೃವಾಗಿ ಖಂಡಿಸುವುದಾಗಿ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಅವರಿಗೆ ದೂರವಾಣ ಮೂಲಕ ಸಂಪರ್ಕಿಸಿ ದೂರು ನೀಡಿದ ಅವರು ಕೂಡಲೇ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಹಾಗೂ ದೀಪಾವಳಿ ಹಬ್ಬದ ನೇಪ ಮಾಡಿ ಜೂಜಾಟಕ್ಕೆ ಇಳಿಯುವವರ ಮೇಲೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಎಸ್ಪಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವ ಬಗ್ಗೆ ತಿಳಿಸಿದರು.
ಹಳಿಯಾಳ ಪೋಲಿಸ್ ವೃತ್ತ ನೀರಿಕ್ಷಕ ಲೋಕಾಪುರ ಅವರಿಗೂ ದೂರವಾಣ ಮೂಲಕ ಸಂಪರ್ಕಿಸಿದ ಅವರು ಯಾವುದೇ ಕಾರಣಕ್ಕೂ ಹಬ್ಬದ ಸಿಹಿ ಸಂದರ್ಭದಲ್ಲಿ ಜೂಜಾಟದಂತಹ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಕ್ರಮಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದರು.
Leave a Comment